ಕಲಬುರಗಿ:ಬಿಸಿಲೂರು ಕಲಬುರಗಿ ಕಲಾವಿದನ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಗಳು ಅನಾವರಣಗೊಂಡಿವೆ. ಖುರ್ತಾ ಫೈಜಾಮು ತೊಟ್ಟು ಕೊರಳಿಗೆ ಶಾಲು ಹಾಕಿ ಮುಂದೆ ಹೆಜ್ಜೆ ಇಡುವ ಪ್ರತಿಮೆಗಳು ನೋಡಲು ತೇಟ್ ಮೋದಿಯವರಂತೆ ಕಾಣುತ್ತಿವೆ. ಇದೆ 19 ರಂದು ಕಲಬುರಗಿ ಜಿಲ್ಲೆಗೆ ಆಗಮಿಸಿಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗರೆ ಕೊಡಲು ಕಲಾವಿದ ಉತ್ಸುಕರಾಗಿದ್ದಾರೆ. ಆದರೆ, ಪ್ರಧಾನಿಯವರ ಭದ್ರತೆ ಹಿನ್ನೆಲೆ ಕಲಾವಿದನಿಗೆ ಅವಕಾಶ ಸಿಕ್ಕಿಲ್ಲ ಇದರಿಂದ ನಿರಾಶರಾದ ಕಲಾವಿಧ ಖುದ್ದು ಮೊದಿ ಕಚೇರಿಗೆ ಟ್ವೀಟ್ ಮಾಡಿದ್ದು ಅಲ್ಲಿಂದ ಸಕರಾತ್ಮಕ ಸ್ಪಂಧನೆ ಸಿಗುವ ನೀರಿಕ್ಷೆಯಲ್ಲಿದ್ದಾರೆ.
ನೋಡಲು ಅಂದವಾಗಿರುವ ಥೇಟ್ ಪ್ರಧಾನಿ ನರೇಂದ್ರ ಮೋದಿಯವರಂತೆ ಕಾಣುವ ಈ ಮೂರ್ತಿಗಳನ್ನು ಸಿದ್ದ ಪಡಿಸಿರೋದು ಬಿಸಿಲೂರು ಕಲಬುರಗಿಯ ಖ್ಯಾತ ಕಲಾವಿಧ ವಿಶ್ವೇಶ್ವರಯ್ಯ ಭೋವಿ, ಕಪನೂರ್ ಕೈಗಾರಿಕಾ ಪ್ರದೇಶದಲ್ಲಿ ಮೂರ್ತಿ ತಯಾರಿಕಾ ಘಟಕ ಹೊಂದಿರುವ ವಿಶ್ವೇಶ್ವರಯ್ಯ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಬರಲಿದ್ದಾರೆಂಬ ಮಾಹಿತಿ ಅರಿತು ಮೋದಿಗೆ ಅರವರೇ ಮೂರ್ತಿ ಉಡುಗರೆ ಕೊಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಮೋದಿಯ ಡಿಫರೆಂಟ್ ಉಡುಪುಗಳು ತೊಟ್ಟಿರುವ ಮೂರ್ತಿಗಳನ್ನ ಸಿದ್ದಪಡಿಸಿರುವ ಕಲಾವಿದ:ಮೋದಿಯ 60ಕ್ಕೂ ಅಧಿಕ ಡಿಫರೆಂಟ್ ಉಡುಪುಗಳು ತೊಟ್ಟಿರುವ ಮೂರ್ತಿಗಳನ್ನ ಸಿದ್ದಪಡಿಸಿದ್ದಾರೆ. ಇದೆ 19 ರಂದು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡಕ್ಕೆ ಮೋದಿ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಮೋದಿ ಅವರಿಗೆ ಕೊಡುವ ಆಸೆ ಹೊಂದಿದ್ದಾರೆ. ಆದರೆ, ಪ್ರಧಾನಿ ಅವರ ಭದ್ರತೆ ಹಿನ್ನೆಲೆ ಜಿಲ್ಲಾಡಳಿತ ಉಡುಗೊರೆ ನೀಡಲು ಅನುಮತಿ ನೀಡಿಲ್ಲ, ಇದು ಕಲಾವಿದನಿಗೆ ನಿರಾಸೆ ಮೂಡಿಸಿದ್ದು, ಖುದ್ದು ಪ್ರಧಾನಿ ಕಚೇರಿ, ಮಾಧ್ಯಮ, ಸಿಎಂ ಸೇರಿ ಹಲವರಿಗೆ ಹ್ಯಾಷ್ಯ್‌ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಸಕರಾತ್ಮಕ ಸ್ಪಂದನೆ ಸಿಗಬಹುದು ಎಂಬ ನೀರಿಕ್ಷೆಯಲ್ಲಿದ್ದಾರೆ.