ಕರ್ನಾಟಕ

karnataka

ETV Bharat / state

ಕಲಬುರಗಿಯ ರೌಡಿಶೀಟರ್​​ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - Murder Case Rowdy sheeter

ಕಲಬುರಗಿಯ ರೌಡಿಶೀಟರ್​ ಮಾಮು ಡಾನ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನ್ಯೂ ರಾಘವೇಂದ್ರ ಪೊಲೀಸ್​ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ. ಹಣಕಾಸಿನ ಹಿನ್ನೆಲೆ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

Arrest of Rowdisheater Murder Case
ರೌಡಿಶೀಟರ್​ ಕೊಲೆ ಪ್ರಕರಣ ಆರೋಪಿಗಳು

By

Published : Apr 21, 2020, 11:41 PM IST

ಕಲಬುರಗಿ: ರೌಡಿಶೀಟರ್ ಮಾಮು ಡಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ರಾಘವೇಂದ್ರ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿಶೀಟರ್​ ಕೊಲೆ ಪ್ರಕರಣದ ಆರೋಪಿಗಳು

ಆರೋಪಿಗಳಾದ ಅಸ್ಲಾಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಾಂ, ರುಕ್ಮುಮ್ಮುದಿನ್ ಬಾಬಾ ಅಲಿಯಾಸ್ ಚಾವನಿ ಬಾಬಾ, ಮೆಹಬೂಬ್ ಪಟೇಲ್ ಅಲಿಯಾಸ್ ಬಬಲು, ಮಹ್ಮದ್ ಸದ್ದಾಂ ಅಲಿಯಾಸ್ ಲಂಗಡು ಸದ್ದಾಂ ಬಂಧಿತರು.

ಏಪ್ರಿಲ್ 18ರಂದು ರೌಡಿಶೀಟರ್​​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಇಂದು ಎಂ.ಎಸ್.ಕೆ.ಮಿಲ್ ಬಡಾವಣೆಯಲ್ಲಿ ಅಡಗಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಹಣಕಾಸಿನ ವಿಚಾರವಾಗಿ ಹಾಗೂ ಹಳೇ ವೈಷಮ್ಯದಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ‌.

ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿ ತೆಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ‌.

ABOUT THE AUTHOR

...view details