ಸೇಡಂ: ಭಾರೀ ಮೊತ್ತದ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾರೀ ಮೊತ್ತದ ಖೋಟಾ ನೋಟು ಸಾಗಣೆ ಮಾಡಲು ಯತ್ನ:ಆರೋಪಿ ಬಂಧನ - sedam latest news
ಬಂಧಿತನಿಂದ 500, 200 ಮತ್ತು 100 ರೂಪಾಯಿ ಮುಖ ಬೆಲೆಯ 4.22 ಲಕ್ಷ ಖೋಟಾ ನೋಟುಗಳು ಮತ್ತು ಒಂದು ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ.
ಚಿನ್ನುಸಾಬ ಮಳಗಿ ಬಂಧಿತ ಆರೋಪಿ. ಈತ ಖೊಟಾ ನೋಟುಗಳನ್ನು ಬ್ಯಾಗ್ನಲ್ಲಿಟ್ಟುಕೊಂಡು ಬೇರೆಡೆ ಸಾಗಿಸಲು ಯತ್ನ ನಡೆಸಿದ್ದಾಗ. ಕಲಬುರಗಿಯ ಡಿಸಿಐಬಿ ಪಿಎಸ್ಐ ಪರಶುರಾಮ ವನಂಜಕರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 500, 200 ಮತ್ತು 100 ರೂಪಾಯಿ ಮುಖ ಬೆಲೆಯ 4.22 ಲಕ್ಷ ಖೋಟಾ ನೋಟುಗಳು ಮತ್ತು ಒಂದು ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ. ಈ ನೋಟುಗಳನ್ನು ಎಲ್ಲಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ, ಎಲ್ಲಿಂದ ತಂದಿದ್ದ, ಎಲ್ಲಿ ಪ್ರಿಂಟ್ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಮುಂದುವರೆಸಿರುವುದಾಗಿ ಪಿಎಸ್ಐ ನಾನಾಗೌಡ ಅವರು ತಿಳಿಸಿದ್ದಾರೆ.