ಕಲಬುರಗಿ: ಐತಿಹಾಸಿಕ ಬಹುಮನಿ ಕೋಟೆಯೊಳಗೆ ಅಕ್ರಮವಾಗಿ ನಿರ್ಮಿಸಿರುವ 280 ಮನೆಗಳನ್ನು ಏಳು ದಿನಗಳಲ್ಲಿ ತೆರವುಗೊಳಿಸಲು ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಬಹುಮನಿ ಕೋಟೆಯನ್ನೂ ಬಿಡದ ಜನ.. ಅಕ್ರಮ 280 ಮನೆಗಳ ತೆರವಿಗೆ ಆದೇಶ.. - undefined
ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಕಾಯ್ದೆ ಅನ್ವಯ ಸ್ಮಾರಕಗಳನ್ನು ಅತಿಕ್ರಮಿಸಿಕೊಳ್ಳಬಾರದೆಂಬ ನಿಯಮವಿದೆ. ಆದರೂ ಇಲ್ಲಿ ಮನೆ ಕಟ್ಟಿಕೊಂಡು ಜನ ವಾಸವಾಗಿದ್ದಾರೆ.
ಅಕ್ರಮ 280 ಮನೆಗಳ ತೆರವಿಗೆ ಆದೇಶ
ಕಲಬುರಗಿಯ ಐತಿಹಾಸಿಕ 13ನೇ ಶತಮಾನದ ಬಹುಮನಿ ಕೋಟೆಯೊಳಗೆ 280ಕ್ಕೂ ಅಧಿಕ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡು ಜನ ವಾಸವಾಗಿದ್ದಾರೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಕಾಯ್ದೆ ಅನ್ವಯ ಸ್ಮಾರಕಗಳನ್ನು ಅತಿಕ್ರಮಿಸಿಕೊಳ್ಳಬಾರದೆಂಬ ನಿಯಮವಿದೆ. ಆದರೂ ಇಲ್ಲಿ ಮನೆ ಕಟ್ಟಿಕೊಂಡು ಜನ ವಾಸವಾಗಿದ್ದಾರೆ.
ಈ ಸಂಬಂಧ ಹಲವು ಬಾರಿ ಅಕ್ರಮ ಮನೆಗಳ ತೆರುವಿಗೆ ಸೂಚಿಸಿದರೂ ಖಾಲಿ ಆಗಿಲ್ಲ. ಈ ಹಿನ್ನೆಲೆ ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸದಿದ್ದರೆ, ಇಲಾಖೆಯಿಂದ ಮನೆಗಳನ್ನು ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.