ಕಲಬುರಗಿ:ಸೇಡಂ ಪಟ್ಟಣದ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸದ ವೇಳೆ ತಗ್ಗು ಗುಂಡಿಗೆ ಬಿದ್ದು ಬಿಹಾರ ಮೂಲದ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಾಸವದತ್ತಾ ಕಾರ್ಖಾನೆಯಲ್ಲಿ ಮತ್ತೊಬ್ಬ ಕಾರ್ಮಿಕ ದಾರುಣ ಸಾವು - ವಾಸವದತ್ತಾ ಸಿಮೆಂಟ್ ಕಾರ್ಖಾನೆ
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸದ ವೇಳೆ ತಗ್ಗು ಗುಂಡಿಗೆ ಬಿದ್ದು ಮತ್ತೊಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಕಾರ್ಮಿಕ ದಾರುಣ ಸಾವು
ಸೋಮವಾರ ರಾತ್ರಿ ಪ್ಯಾಕಿಂಗ್ ಪ್ಲಾಂಟ್ 4 ರಲ್ಲಿ ಸಿಮೆಂಟ್ ಚೀಲ ತುಂಬುವ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಬಿಹಾರ ಮೂಲದ ಹರಿಕಿಶನ ಪಾಸ್ವಾನ (57) ಎಂಬಾತ ದಾರುಣ ಸಾವು ಕಂಡಿದ್ದಾನೆ. ಘಟನೆ ಬಗ್ಗೆ ಸುದ್ದಿ ತಿಳಿದ ಕಾರ್ಮಿಕ ಮುಖಂಡ ಅನೀಲಕುಮಾರ ಪಾಟೀಲ ತೇಲ್ಕೂರ ಮೃತನ ಕುಟುಂಬಕ್ಕೆ ನೌಕರಿ ಮತ್ತು ಪರಿಹಾರ ಕೊಡಿಸಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪಿಎಸ್ಐ ಸುಶೀಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.