ಕರ್ನಾಟಕ

karnataka

ETV Bharat / state

ಸೇಡಂನಲ್ಲಿ ನಾಡಿನ ಹೆಸರಾಂತ ಸಾಹಿತಿಗಳಿಗೆ 'ಅಮ್ಮ ಪ್ರಶಸ್ತಿ' ಪ್ರದಾನ - Matoshree Mahadevamma Nagappa Munoora Foundation

ಸೇಡಂನಲ್ಲಿ ನೀಡಲಾದ ರಾಜ್ಯಮಟ್ಟದ ಅಮ್ಮ ಪ್ರಶಸ್ತಿ 2 ಕೆಜಿ ತೊಗರಿ ಬೆಳೆ, 5 ಸಾವಿರ ನಗದು, ಅಮ್ಮಂದಿರು ಹೊಲಿದಿರುವ ಕೌದಿ, ಪ್ರಶಸ್ತಿ ಪತ್ರ ಒಳಗೊಂಡಿತ್ತು.

amma-award-for-famed-literary-figures-in-sedam
ಸೇಡಂನಲ್ಲಿ ನಾಡಿನ ಹೆಸರಾಂತ ಸಾಹಿತಿಗಳಿಗೆ 'ಅಮ್ಮ ಪ್ರಶಸ್ತಿ' ಪ್ರದಾನ

By

Published : Nov 26, 2020, 9:09 PM IST

ಸೇಡಂ:ನಾಡಿನ ಹೆಸರಾಂತ ಸಾಹಿತಿಗಳಿಗೆ ರಾಜ್ಯಮಟ್ಟದ ಅತ್ಯುನ್ನತ 'ಅಮ್ಮ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೊಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪ್ರಶಸ್ತಿ ಪ್ರದಾನ ಮಾಡಿದರು.

ಸೇಡಂನಲ್ಲಿ ನಾಡಿನ ಹೆಸರಾಂತ ಸಾಹಿತಿಗಳಿಗೆ 'ಅಮ್ಮ ಪ್ರಶಸ್ತಿ' ಪ್ರದಾನ

ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಕಲಬುರಗಿಯ ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ `ಹುಲಿಯ ನೆತ್ತಿಯ ನೆರಳು’ ಮತ್ತು ಡಾ. ಸತ್ಯಮಂಗಲ ಮಹಾದೇವ ಅವರ 'ಪಂಚವರ್ಣದ ಹಂಸ’ (ಕವನ ಸಂಕಲನ)ಕ್ಕೆ 20ನೇ ವರ್ಷದ ಅಮ್ಮ ಪ್ರಶಸ್ತಿ ಲಭಿಸಿದೆ.

ABOUT THE AUTHOR

...view details