ಸೇಡಂ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸರಳವಾಗಿ ಆಚರಿಸಿದ್ದಾರೆ.
ಮಾಸ್ಕ್ ವಿತರಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಿದ ಶಾಸಕ - Ambedkar Jayanti celebrates
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಂಬೇಡ್ಕರ್ ಜಯಂತಿಯನ್ನ ವಿಭಿನ್ನವಾಗಿ ಆಚರಿಸಿ ಗಮನ ಸೆಳೆದರು. ಇದೇ ವೇಳೆ ಅಂಬೇಡ್ಕರ್ ಅವರ ಜೀವನಾದರ್ಶ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು
ಮಾಸ್ಕ್ ವಿತರಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಿ ಶಾಸಕ
ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅವರು, ಅಂಬೇಡ್ಕರ್ ಅವರ ಜೀವನಾದರ್ಶ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಈ ವೇಳೆ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಸಿಪಿಐ ರಾಜಶೇಖರ ಹಳಗೋದಿ, ಮುಖಂಡ ವಿಜಯಕುಮಾರ ಆಡಕಿ ಇನ್ನಿತರರು ಇದ್ದರು.