ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಬಸವೇಶ್ವರ ಪುತ್ಥಳಿಗೆ ಅಪಮಾನ, ಕೆಲಕಾಲ ಆತಂಕ - ಬಸವೇಶ್ವರ ಪುತ್ಥಳಿಗೆ ಅಪಮಾನ ಮಾಡಿದ ಆರೋಪಿ ಪೊಲೀಸ್​ ವಶಕ್ಕೆ

ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಅಪಮಾನ ಮಾಡಲಾಗಿದೆ ಎಂದು ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಕಲಬುರಗಿಯಲ್ಲಿ ಬಸವೇಶ್ವರ ಪುತ್ಥಳಿಗೆ ಅಪಮಾನ ಮಾಡಲಾಗಿದೆ
ಕಲಬುರಗಿಯಲ್ಲಿ ಬಸವೇಶ್ವರ ಪುತ್ಥಳಿಗೆ ಅಪಮಾನ ಮಾಡಲಾಗಿದೆ

By

Published : Jun 23, 2022, 8:37 PM IST

ಕಲಬುರಗಿ: ಬಸವೇಶ್ವರ ಪುತ್ಥಳಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥನೊಬ್ಬ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಹಿಂದೆ ಯಾರ ಕೈವಾಡ ಇದೆಯೋ ಅವರನ್ನು ಪತ್ತೆ ಮಾಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ‌‌.


ಸ್ಥಳಕ್ಕೆ ಚಿತ್ತಾಪುರ ಪಿಎಸ್ಐ ಎಎಸ್ ಪಟೇಲ್ ಧಾವಿಸಿ ಪ್ರತಿಮೆಗೆ ಅವಮಾನಿಸಿದ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ: ಅಧಿಕಾರಿಯ ಬೀಳ್ಕೊಡುಗೆಯಲ್ಲಿ ಗುಂಡು ಹಾರಿಸಿ ಪೊಲೀಸರ ಡ್ಯಾನ್ಸ್​: 9 ಸಿಬ್ಬಂದಿ ಅಮಾನತು

For All Latest Updates

TAGGED:

ABOUT THE AUTHOR

...view details