ಕರ್ನಾಟಕ

karnataka

ETV Bharat / state

ಕೆಕೆಆರ್‌ಡಿಬಿ ಹಣ ವಿದೇಶ ಪ್ರವಾಸಕ್ಕೆ ಬಳಕೆ: ಅಧ್ಯಕ್ಷ ರೇವೂರ ವಿರುದ್ಧ ಅಲ್ಲಮಪ್ರಭು ಪಾಟೀಲ್ ಆಕ್ರೋಶ - ನೈದರ್ಲ್ಯಾಂಡ್

ವಿದೇಶ ಪ್ರವಾಸಕ್ಕೆ ಕೆಕೆಆರ್‌ಡಿಬಿ ಹಣವನ್ನು ದತ್ತಾತ್ರೇಯ ಪಾಟೀಲ್ ರೇವೂರ ಬಳಕೆ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಆರೋಪ ಮಾಡಿದ್ದಾರೆ.

ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಅಲ್ಲಮಪ್ರಭು ಪಾಟೀಲ್
ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಅಲ್ಲಮಪ್ರಭು ಪಾಟೀಲ್

By

Published : Dec 23, 2022, 11:47 AM IST

ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಮಾತನಾಡಿದರು

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ ಕೆಕೆಆರ್‌ಡಿಬಿ ಹಣದಲ್ಲಿ 85 ಲಕ್ಷ ಹಣ ವಿದೇಶ ಪ್ರವಾಸಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಬಳಕೆ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಆರೋಪ ಮಾಡಿದ್ದಾರೆ.

ಕೆಕೆಆರ್‌ಡಿಬಿ ಹಣ ವಿದೇಶ ಪ್ರವಾಸಕ್ಕೆ ಬಳಕೆ

ಇದೇ 06 ರಿಂದ 14 ರವರೆಗೆ ನೈದರ್ಲ್ಯಾಂಡ್, ಬೆಲ್ಜಿಯಂ, ಸ್ವಿಟ್ಜರ್​ಲ್ಯಾಂಡ್​ ಹೋಗಲು ಯೋಜನೆ ರೂಪಿಸಲಾಗಿತ್ತು. ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ, ವಿಶೇಷ ಕಾರ್ಯದರ್ಶಿಗಳು, ಓರ್ವ ಉದ್ಯಮಿ ಫಾರೀನ್​ ಟ್ರಿಪ್​ ಹೋಗುವವರಿದ್ದರು. ಇದಕ್ಕಾಗಿ ಟ್ರಾವೆಲ್​ ಸಂಸ್ಥೆಗೆ 84 ಲಕ್ಷ 97 ಸಾವಿರ 736 ರೂ ಸಂದಾಯ ಮಾಡಲಾಗಿದೆ.

ಕೆಕೆಆರ್‌ಡಿಬಿ ಹಣ ವಿದೇಶ ಪ್ರವಾಸಕ್ಕೆ ಬಳಕೆ

ಸದ್ಯ ಅನಾರೋಗ್ಯದ ಕಾರಣ ಪ್ರವಾಸ ತಾತ್ಕಾಲಿಕ ರದ್ದು ಮಾಡಲಾಗಿದೆ. ಮುಂದೆ ಹೋಗಬಹುದು. ಆದರೆ ಟ್ರಾವೆಲ್​ ಸಂಸ್ಥೆಗೆ ಸಂದಾಯ ಮಾಡಲಾದ ಹಣ ವಾಪಸ್ ಪಡೆದಿಲ್ಲ. ವಿದೇಶ ಪ್ರವಾಸಕ್ಕೆ ರಾಜ್ಯ ಬಜೆಟ್​ ಬಳಕೆ ಮಾಡಬೇಕಿತ್ತು. ಆದರೆ ಅಭಿವೃದ್ಧಿಗೆ ಮೀಸಲಾಗಿ ನೀಡುವ ಅನುದಾನ ಬಳಕೆ ಮಾಡಿರುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.

ಓದಿ:ಪಿಎಸ್​ಐ ಪರೀಕ್ಷೆ ಹಗರಣದ ಆರೋಪಿಗೆ ಸನ್ಮಾನ.. ಕಲಬುರಗಿಯಲ್ಲಿ ತಾರಕಕ್ಕೇರಿದ ಮಾಜಿ, ಹಾಲಿ ಶಾಸಕರ ವಾಕ್ಸಮರ

ABOUT THE AUTHOR

...view details