ಕಲಬುರಗಿ:ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾನುವಾರ ಸಂಪೂರ್ಣ ಲಾಕ್ಡೌನ್ ವಿಧಿಸಿದ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶಿಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಮದ್ಯ ಮಾರಾಟ ಬಂದ್: ಜಿಲ್ಲಾಧಿಕಾರಿ ಆದೇಶ - ಲಾಕ್ಡೌನ್ 4.0
ಲಾಕ್ಡೌನ್ 4.0ನಲ್ಲಿ ಸ್ವಲ್ಪ ಮಟ್ಟಿನ ವಿನಾಯಿತಿ ನೀಡಿದ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ಆದೇಶಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ.
![ಕಲಬುರಗಿಯಲ್ಲಿ ಭಾನುವಾರ ಮದ್ಯ ಮಾರಾಟ ಬಂದ್: ಜಿಲ್ಲಾಧಿಕಾರಿ ಆದೇಶ Kalburgi](https://etvbharatimages.akamaized.net/etvbharat/prod-images/768-512-7314117-320-7314117-1590221834417.jpg)
ಜಿಲ್ಲಾಧಿಕಾರಿ ಆದೇಶ
ಸರ್ಕಾರದ ಆದೇಶದಂತೆ ಕಲಬುರಗಿಯಲ್ಲಿಯೂ ಭಾನುವಾರ ಇಡೀ ದಿನ ಸಂಪೂರ್ಣ ಲಾಕ್ಡೌನ್ ಇರುವ ಕಾರಣ ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಟ ನಿಷೇಧಿಸಲಾಗಿದೆ. ಸೋಮವಾರ ಬೆಳಗ್ಗೆಯಿಂದ ಮತ್ತೆ ಯಥಾಸ್ಥಿತಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.
ಇದಾದ ಬಳಿಕ ಮತ್ತೆ ಮೇ 30ರ ಮಧ್ಯರಾತ್ರಿಯಿಂದ ಮೇ 31ರ ಮಧ್ಯರಾತ್ರಿವರೆಗೂ ಸಹ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.