ಕಲಬುರಗಿ: ಅಕ್ರಮವಾಗಿ ಮೂರು ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಆಳಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಳಂದ ಪೊಲೀಸರ ಕಾರ್ಯಾಚರಣೆ: ವ್ಯಕ್ತಿಯ ಬಂಧನ, 3 ಪಿಸ್ತೂಲ್, 10 ಗುಂಡು ವಶಕ್ಕೆ - ಆಳಂದ ಪೊಲೀಸರ ಪಿಸ್ತೂಲು ಕಾರ್ಯಾಚರಣೆ
ಅಕ್ರಮವಾಗಿ ಮೂರು ನಾಡ ಪಿಸ್ತೂಲ್ ಹೊಂದಿದ್ದ ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದ ವ್ಯಕ್ತಿಯೊಬ್ಬನನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
![ಆಳಂದ ಪೊಲೀಸರ ಕಾರ್ಯಾಚರಣೆ: ವ್ಯಕ್ತಿಯ ಬಂಧನ, 3 ಪಿಸ್ತೂಲ್, 10 ಗುಂಡು ವಶಕ್ಕೆ aland-police-arrested-illegal-gun-supplier](https://etvbharatimages.akamaized.net/etvbharat/prod-images/768-512-12933107-thumbnail-3x2-arrest.jpg)
ಆಳಂದ ಪೊಲೀಸ್
ಖಜೂರಿ ಗ್ರಾಮದ ಉಸ್ಮಾನ ಶೇಖ್ ಬಂಧಿತ ಆರೋಪಿ. ಆರೋಪಿಯಿಂದ 3 ನಾಡ ಪಿಸ್ತೂಲ್ ಮತ್ತು10 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಬಂಧಿತ ಉಸ್ಮಾನ ಶೇಖ್ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಿಸ್ತೂಲ್ ಎಲ್ಲಿಂದ ತರುತ್ತಿದ್ದ, ಯಾರಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಕುರಿತು ತನಿಖೆ ಕೈಗೊಂಡಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.