ಕಲಬುರ್ಗಿ :ದೇಶದಲ್ಲಿನ ಜನಾಂಗೀಯ ದ್ವೇಷ ಹಾಗೂ ಗುಂಪು ಹತ್ಯೆಗಳನ್ನು ತಡೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜನಾಂಗೀಯ ದ್ವೇಷ, ಗುಂಪು ಹತ್ಯೆಗಳ ತಡೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ - ಅಖಿಲ ಭಾರತ ದೌರ್ಜನ್ಯ ವಿರೋಧಿ ದಿನ
ಅಖಿಲ ಭಾರತ ದೌರ್ಜನ್ಯ ವಿರೋಧಿ ದಿನ ಆಚರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು..

ಎಐಟಿಯುಸಿ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಎಐಟಿಯುಸಿ
ಅಖಿಲ ಭಾರತ ದೌರ್ಜನ್ಯ ವಿರೋಧಿ ದಿನ ಆಚರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ ಜನಾಂಗೀಯ ಹಲ್ಲೆಗಳು ಹೆಚ್ಚಿವೆ. ಜಾತಿ, ಧರ್ಮದ ಹೆಸರಲ್ಲಿ ತಾರತಮ್ಯ ನಡೆದಿದ್ದು, ಗುಂಪು ಹತ್ಯೆಗಳು ಹೆಚ್ಚುತ್ತಿವೆ. ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ದೌರ್ಜನ್ಯಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.