ಕರ್ನಾಟಕ

karnataka

ETV Bharat / state

ರಸಗೊಬ್ಬರ ಪೂರೈಕೆ, ಮಾರಾಟದ ಸಮಗ್ರ ಮಾಹಿತಿ ನೀಡಿ: ಗುರುಶಾಂತಗೌಡ ಪಾಟೀಲ - kalaburagi Agriculture and Industrial Standing Committee meeting

ಕಲಬುರಗಿ ಜಿಲ್ಲಾ ಪಂಚಾಯತ್​ ನೂತನ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯತ್​ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯನ್ನು ನಡೆಸಲಾಯಿತು.

kalaburagi
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆ

By

Published : Sep 2, 2020, 11:39 PM IST

ಕಲಬುರಗಿ: ಪ್ರಸಕ್ತವಾಗಿ ಜಿಲ್ಲೆಗೆ ಪೂರೈಕೆ ಮಾಡಿಕೊಳ್ಳಲಾಗಿರುವ ರಸಗೊಬ್ಬರ ಹಾಗೂ ಮಾರಾಟ ಮಾಡಲಾದ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್​ ನೂತನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ್​ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯನ್ನು ನಡೆಸಿ ಮಾತನಾಡಿದ ಅವರು, ರಸಗೊಬ್ಬರ ಅದರಲ್ಲೂ ಯೂರಿಯಾ ಕಳೆದ ವರ್ಷಕ್ಕಿಂತ ಹೆಚ್ಚಿನದ್ದು ಪೂರೈಕೆಯಾದರೂ ಅಭಾವ ಹೇಗೆ ಉಂಟಾಯಿತು? ಹೆಚ್ಚಿನ ದರದಲ್ಲಿ ಏಕೆ ಮಾರಾಟವಾಯಿತು ಜೊತೆಗೆ ಯಾವ-ಯಾವ ಡೀಲರ್​ಗಳಿಗೆ ಎಷ್ಟು ಪೂರೈಕೆ ನೀಡಲಾಗಿದೆ ಎಂಬಿತ್ಯಾದಿ ವಿವರ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ನಿರ್ದೇಶನ ನೀಡಲಾಯಿತು.

ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಒಬ್ಬರೂ ರೈತರು ಉಳಿಯದಂತೆ ಸಮೀಕ್ಷೆ ಮಾಡಬೇಕು. ಜತೆಗೆ ಬೆಳೆವಿಮೆ ದೊರಕಿಸುವ ನಿಟ್ಟಿನಲ್ಲಿ ವರದಿ ರೂಪಿಸುವಂತೆ ಸಹ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಎಪಿಎಂಸಿ ತರಕಾರಿ ಹಾಗೂ ಹಣ್ಣು ಮಾರುಕಟ್ಟೆಯಲ್ಲಿ ಕಮೀಷನ್ ಪಡೆಯುವುದು ನಿಲ್ಲಬೇಕು. ಜೊತೆಗೆ ಆನ್​ಲೈನ್ ಬಿಲ್ಲಿಂಗ್ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಕೆಯಾಗಬೇಕೆಂದು ಎಪಿಎಂಸಿ ಅಧಿಕಾರಿಗೆ ಸೂಚಿಸಲಾಯಿತಲ್ಲದೇ ಸಭೆಗೆ ಗೈರು ಹಾಜರಾಗಿದ್ದ ಎಪಿಎಂಸಿ ಕಾರ್ಯದರ್ಶಿಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಯಿತು.

ವಸತಿ ನಿಲಯ, ಆಸ್ಪತ್ರೆಗಳಿಗೆ ಸಹಕಾರಿ ನೇಕಾರ ಸಂಘದ ಉತ್ಪನ್ನಗಳನ್ನೇ ಖರೀದಿಸಲು ಸೂಚನೆ:

ಆಧುನಿಕ ಹೊಡೆತಕ್ಕೆ ನೇಕಾರರು ಕಂಗಾಲಾಗಿದ್ದು, ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗಲು ಆಸ್ಪತ್ರೆ, ವಸತಿ ನಿಲಯಗಳಿಗೆ ಬೇಕಾಗುವ ಬೆಡ್ ಶೀಟ್ ಹಾಗೂ ಇತರ ಉತ್ಪನ್ನಗಳನ್ನು ಸಹಕಾರಿ ಸಂಘಗಳಿಂದಲೇ ಖರೀದಿಸುವಂತೆ ಜಿಲ್ಲಾ ಪಂಚಾಯತ್​ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ ಸೂಚನೆ ನೀಡಿದರು.

ಸಹಕಾರಿ ನೇಕಾರ ಸಂಘದವರು ಉತ್ಪಾದಿಸುವ ಬೆಡ್ ಶೀಟ್ ಚಾದರ್, ಟವೆಲ್ ಮುಂತಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಕ್ತಾ ಇಲ್ಲ, ಜೊತೆಗೆ ಬೆಲೆಯೂ ಸಿಕ್ತಾ ಇಲ್ಲ. ಹೀಗಾಗಿ ಆಳಂದ ತಾಲೂಕಿನ ಮಾದನಹಿಪ್ಪರಗಾ ಸೇರಿ ಇತರೆಡೆ ಕೈ ಮಗ್ಗಗಳು ಬಂದಾಗುತ್ತಿವೆ. ‌ಹೀಗಾಗಿ ಡಿಹೆಚ್ಓ ಹಾಗೂ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹಾಲಿನ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಶೋಷಣೆ ತಪ್ಪಿಸಬೇಕಿದೆ. ವಿನಾಕಾರಣ ರೈತರ ಹಾಲನ್ನು ತಿರಸ್ಕರಿಸುವ ಕೆಲಸ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದ್ದು ‌ಇದು ನಿಲ್ಲಬೇಕೆಂದರು.

ಅರಣ್ಯ ಇಲಾಖೆಯಲ್ಲಿ ಪ್ರಸಕ್ತವಾಗಿ ಶೇ 50ರಷ್ಟು ಅನುದಾನದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ. ಆದರೂ ತಾಲೂಕಿಗೆ 9 ಕೀ.‌ಮೀ ಉದ್ದ ಮಾತ್ರ ಸಸಿ ನೆಡುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಅರಣ್ಯಾಧಿಕಾರಿಗಳು ಸಭೆಗೆ ವಿವರಣೆ ನೀಡಿದರು.

ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಡಿ 14.75 ಕೋಟಿ.‌ರೂ ಅನುದಾನ ಬರಬೇಕಿದೆ. ಅದೇ ರೀತಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಸಹ 7 ಕೋಟಿ. ರೂ ಅನುದಾನ ಬರಬೇಕಿದೆ. ಬಂದ ನಂತರ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸಭೆಗೆ ವಿವರಣೆ ನೀಡಿದರು.

For All Latest Updates

ABOUT THE AUTHOR

...view details