ಕಲಬುರಗಿ: ಕೊರೊನಾ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಲಾಕ್ಡೌನ್ ಆದೇಶ ಜಾರಿ ಮಾಡಿದೆ. ಮನೆಯಿಂದ ಅನಗತ್ಯವಾಗಿ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೆ ಇಲ್ಲಿನ ಸೇಡಂನಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡುವ ಆದೇಶ ನೀಡಿರುವ ಹಿನ್ನೆಲೆ ನಗರದ ಪೆಟ್ರೋಲ್ ಬಂಕ್ಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು.
ಪೆಟ್ರೋಲ್ ಬಂಕ್ ಬಂದ್ ಆದೇಶ: ಕಲುಬುರಗಿಯಲ್ಲಿ ಬಂಕ್ ಮುಂದೆ ಜನಸಂದಣಿ - karnataka lockdown
ಕೊರೊನಾ ಹರಡದಂತೆ ತಡೆಯಲು ಮುಂಜಾಗ್ರತೆವಹಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಪೆಟ್ರೋಲ್ ಬಂಕ್ ಬಂದ್ ಮಾಡುವ ಆದೇಶ ಹೊರಡಿಸಿದ ಕ್ಷಣದಲ್ಲೇ ಪೆಟ್ರೋಲ್ ಬಂಕ್ಗಳತ್ತ ಜನಸ್ತೋಮವೇ ಹರಿದು ಬರುತ್ತಿದೆ.
ಕೊರೊನಾ
ಪಟ್ಟಣದ ಪೆಟ್ರೋಲ್ ಬಂಕ್ ಸೇರಿದಂತೆ ತಾಲೂಕಿನ ಕೋಡ್ಲಾ, ಮಳಖೇಡ, ಮುಧೋಳ ಭಾಗಗಳಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ನೂರಾರು ದ್ವಿಚಕ್ರ ವಾಹನಗಳು ಮತ್ತು ಕಾರ್ಗಳು ಆಗಮಿಸಿದ್ದವು. ಪೆಟ್ರೋಲ್ಗಾಗಿ ನಾ ಮುಂದು ತಾ ಮುಂದು ಎನ್ನುವ ನೂಕುನುಗ್ಗಲು ಕಂಡುಬಂತು. ಇದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯ್ತು.
TAGGED:
ಕೊರೊನಾ ಲೆಟೆಸ್ಟ್ ನ್ಯೂಸ್