ಕಲಬುರಗಿ: ರಾಜ್ಯದಲ್ಲಿ ಶಾಲೆಗಳ ಪುನಾರಂಭ ಶೀಘ್ರವಾಗಿ ಮಾಡಬಾರದು ಎಂದು ಕಲಬುರಗಿಯಲ್ಲಿ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಆತುರ ಮಾಡಬಾರದು.
ಕೊರೊನಾ ನಿಯಂತ್ರಣ ಬಳಿಕ ಶಾಲೆ ತೆರೆಯಿರಿ.. ಕಲಬುರಗಿಯಲ್ಲಿ ಪೋಷಕರ ಒತ್ತಾಯ - ಕಲಬುರಗಿ ಇತ್ತಿಚಿನ ಸುದ್ದಿ
ಮಕ್ಕಳ ಬಳಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೆ. ಹೀಗಾಗಿ, ಶಾಲೆ ಮರು ಆರಂಭಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡಲಿ..
ಕಲಬುರಗಿಯಲ್ಲಿ ಪೋಷಕರ ಒತ್ತಾಯ
ಕೋವಿಡ್-19 ಸೋಂಕು ರಾಜ್ಯದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕಿತರ ಜತೆ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಹೀಗಿರುವಾಗ ಶಾಲೆ ಆರಂಭಿಸಿದ್ರೆ ಮಕ್ಕಳಿಗೆ ತೊಂದರೆಯಾಗಲಿದೆ ಎಂದರು.
ಮಕ್ಕಳ ಬಳಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೆ. ಹೀಗಾಗಿ, ಶಾಲೆ ಮರು ಆರಂಭಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡಲಿ. ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆಯೇ ಶಾಲೆ ಆರಂಭಿಸಲಿ ಎಂದು ಕಲಬುರಗಿಯಲ್ಲಿ ಪೋಷಕರು ಆಗ್ರಹಿಸಿದ್ದಾರೆ.