ಕಲಬುರಗಿ :ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆದ ಮುಷ್ಕರದ ವೇಳೆ 9 ಜನ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಾಗಿದೆ. ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಬೀದರ್ ವಿಭಾಗದ 5 ಸಿಬ್ಬಂದಿ, ಕೊಪ್ಪಳ ವಿಭಾಗದ 2 ಸಿಬ್ಬಂದಿ, ಬಳ್ಳಾರಿ ವಿಭಾಗದ ಓರ್ವ ಸಿಬ್ಬಂದಿ ಹಾಗೂ ವಿಜಯಪುರ ವಿಭಾಗದ ಓರ್ವ ಸಿಬ್ಬಂದಿ ಸೇರಿ ಒಟ್ಟು 9 ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ.