ಕಲಬುರಗಿ: ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕಮಲಾಪೂರ ಬಳಿಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಕಾರು - ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು - ಕಲಬುರಗಿಯಲ್ಲಿ ರಸ್ತೆ ಅಪಘಾತ, ಓರ್ವ ಸಾವು
ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕಮಲಾಪೂರ ಬಳಿಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೃತಪಟ್ಟವರನ್ನು ಚೆಂಗಟಾ ಗ್ರಾಮದ ಶ್ರೀಕಾಂತ್ ವಗ್ಗೆ (28) ಎಂದು ಗುರುತಿಸಲಾಗಿದೆ.
![ಕಾರು - ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/prod-images/768-512-4227185-thumbnail-3x2-giri.jpg)
ಮೃತಪಟ್ಟವರನ್ನು ಚೆಂಗಟಾ ಗ್ರಾಮದ ಶ್ರೀಕಾಂತ್ ವಗ್ಗೆ (28) ಎಂದು ಗುರುತಿಸಲಾಗಿದೆ. ಕಲಬುರಗಿಯ ತಾಜೋದಿನ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದು ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾಗಾಂವದಿಂದ ಕಮಲಾಪೂರಕ್ಕೆ ಮೃತ ಶ್ರೀಕಾಂತ ತಮ್ಮ ಬೈಕ್ನಲ್ಲಿ ಬರುತ್ತಿದ್ದರು. ಇವರ ಬೈಕ್ ಹಿಂದೆ ತಾಜೋದಿನ್ ಹಾಗೂ ಅವರ ಪತ್ನಿ ಮತ್ತೊಂದು ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಎದುರಿಗೆ ರಭಸವಾಗಿ ಬಂದ ಸ್ವಿಪ್ಟ್ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಬಸಕ್ಕೆ ಶ್ರೀಕಾಂತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಈ ಕುರಿತು ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.