ಸೇಡಂ:ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಹಂದರಕಿ ಬಳಿ ನಡೆದಿದೆ.
ಲಾರಿ ಬೈಕ್ ಮಧ್ಯೆ ಅಪಘಾತ: ಸವಾರ ಸಾವು ಇನ್ನೋರ್ವನಿಗೆ ಗಾಯ - Accident Between Lorry and Bike
ಸೇಡಂ ತಾಲೂಕಿನ ಹಂದರಕಿ ಬಳಿ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವನಿಗೆ ಗಾಯಗಳಾಗಿವೆ.
ಘಟನೆಯಲ್ಲಿ ಚಿತ್ತಾಪುರ ತಾಲೂಕು ಡೋಣಗಾಂವ ನಿವಾಸಿ ಮಲ್ಲಪ್ಪ ಪೂಜಾರಿ (60) ಮೃತಪಟ್ಟಿದ್ದು, ಸಹ ಸವಾರ ಯಲ್ಲಪ್ಪನಿಗೆ ಗಾಯಗಳಾಗಿವೆ.
ಸ್ಥಳಕ್ಕೆ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.