ಕಲಬುರಗಿ: ಮರಕ್ಕೆ ಬೊಲೆರೊ ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಘಟನೆ ಕಮಲಾಪುರ ಬಳಿಯ ಮರಗುತ್ತಿ ಗ್ರಾಮದ ಬಳಿ ನಡೆದಿದೆ.
ಕಲಬುರಗಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಬೊಲೆರೊ:ಯುವಕ ಸಾವು - Accident
ನಸುಕಿನ ಜಾವ ಮರಕ್ಕೆ ಬೊಲೆರೊ ಡಿಕ್ಕಿಯಾಗಿ ಯುವಕ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಮರಕ್ಕೆ ಬುಲೇರೋ ಡಿಕ್ಕಿಯಾಗಿ ಯುವಕ ಸಾವು
ನಗರದ ಬಿದ್ದಾಪುರ ಕಾಲೋನಿ ನಿವಾಸಿ ಸಾಗರ್ ಗುತ್ತೆದಾರ್ (32) ಮೃತ ದುರ್ದೈವಿ. ಬೀದರ್ ಜಿಲ್ಲೆ ಹುಮನಾಬಾದ್ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನಸುಕಿನ ಜಾವ ಕಲಬುರಗಿಗೆ ಬರುವಾಗ ಈ ಅವಘಡ ಸಂಭವಿಸಿದೆ.
ಅತಿವೇಗ ಘಟನೆಗೆ ಕಾರಣ ಎನ್ನಲಾಗಿದ್ದು, ಗಾಯಗೊಂಡಿದ್ದ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.