ಕಲಬುರಗಿ: ಸದಾ ವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಇದೀಗ ಕೊರೊನಾ ಸೊಂಕಿತರಿಗೆ ಜಂಬೋ ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾದ ಹಿನ್ನೆಲೆ ವಾಡಿ ಪಟ್ಟಣದಲ್ಲಿರುವ ಎಸಿಸಿ ಸಿಮೆಂಟ್ ಕಂಪನಿಯ ಅಧಿಕಾರಿಗಳು ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರೆತೆಯಿಂದಾಗಿ ಪ್ರತಿನಿತ್ಯ ಹಲವು ಸೋಂಕಿತರು ಮೃತಪಡುತ್ತಿದ್ದು, ಆಕ್ಸಿಜನ್ ಕೊರೆತೆ ಸರಿದೂಗಿಸುವ ಹಿನ್ನೆಲೆ ಎಸಿಸಿ ಸಿಮೆಂಟ್ ಕಂಪನಿಯಿಂದ 70ಕ್ಕೂ ಅಧಿಕ ಜಂಬೋ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಕಂಪನಿ ಆಡಳಿತ ಮಂಡಳಿ ವಾಡಿ ಠಾಣೆ ಪೊಲೀಸರ ಮೂಲಕ ಜಿಲ್ಲಾಡಳಿತಕ್ಕೆ ಸಿಲಿಂಡರ್ಗಳನ್ನು ಹಸ್ತಾಂತರ ಮಾಡಿದೆ. ಪೊಲೀಸರು ಭದ್ರತೆಯಲ್ಲಿ ಸಿಲಿಂಡರ್‌ಗಳನ್ನ ಕಲಬುರಗಿ ಜಿಮ್ಸ್‌ಗೆ ರವಾನಿಸಿದ್ದಾರೆ.