ಕರ್ನಾಟಕ

karnataka

ETV Bharat / state

ಲಂಚ ಸ್ವೀಕರಿಸುತ್ತಿದ್ದ ಎನ್ಈಕೆಎಸ್ಆರ್‌ಟಿಸಿ ಸಿಬ್ಬಂದಿ ಎಸಿಬಿ ಬಲೆಗೆ - ಎನ್ಈಕೆಎಸ್ಆರ್‌ಟಿಸಿ ಕಚೇರಿ ಮೇಲೆ ಎಸಿಬಿ ದಾಳಿ

ಕಲಬುರಗಿಯಲ್ಲಿ ಬಸ್​ ಕಂಡಕ್ಟರ್​ನಿಂದ ಲಂಚ ಪಡೆಯುತ್ತಿದ್ದ ಎನ್ಈಕೆಎಸ್ಆರ್‌ಟಿಸಿ ಇಲಾಖೆಯ ಎಫ್‌ಡಿಎ ಅಧಿಕಾರಿ ಮತ್ತು ಅಟೆಂಡರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಬಲೆಗೆ ಬಿದ್ದ ಎನ್ಈಕೆಎಸ್ಆರ್‌ಟಿಸಿ ಸಿಬ್ಬಂದಿ
ACB raids NWKRTC office

By

Published : Feb 25, 2020, 5:15 AM IST

ಕಲಬುರಗಿ:ಬಸ್ಕಂಡಕ್ಟರ್​ನಿಂದ ಲಂಚ ಪಡೆಯುತ್ತಿದ್ದ ಎನ್ಈಕೆಎಸ್ಆರ್‌ಟಿಸಿ ಇಲಾಖೆಯ ಎಫ್‌ಡಿಎ ಅಧಿಕಾರಿ ಮತ್ತು ಅಟೆಂಡರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎನ್ಈಕೆಎಸ್ಆರ್‌ಟಿಸಿ ಕಚೇರಿ ಮೇಲೆ ಎಸಿಬಿ ದಾಳಿ

ನಗರದ ಎನ್ಈಕೆಎಸ್ಆರ್‌ಟಿಸಿ ಡಿಪೋ ನಂಬರ್ 1ರಲ್ಲಿ ಎಫ್​ಡಿಎ ಅಧಿಕಾರಿ ಅಖಿಲ್ ಮತ್ತು ಅಟೆಂಡರ್ ಮುನ್ನಾಭಾಯಿ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ. ನಿರ್ವಾಹಕ ವಿದ್ಯಾಧರ ಎನ್ನುವವರಿಂದ 25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿದ್ಯಾಧರ ಚಿಂಚೋಳಿ ಬಸ್ ಡಿಪೋದ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದವರ ಆರೋಗ್ಯ ಸಮಸ್ಯೆ ನಿಮಿತ್ತ 13 ತಿಂಗಳು ರಜೆ ಹಾಕಿದ್ದರು. ಈ ರಜೆಯ ಪ್ರಕರಣ ರದ್ದಿಗೆ ಹಾಗೂ ಸಂಬಳ ಸೆಟ್ಲಮೆಂಟ್ ಮಾಡಿರುವ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ವಿದ್ಯಾಧರ ಅವರಿಂದ 25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿವೈಎಸ್​​ಪಿ ಸುಧಾ ಆದಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ಲಂಚಕೋರ ಸಿಬ್ಬಂದಿಯನ್ನು ಖೆಡ್ಡಾಗೆ ಕೆಡವಿದ್ದಾರೆ.

ABOUT THE AUTHOR

...view details