ಕರ್ನಾಟಕ

karnataka

By

Published : Aug 4, 2021, 7:52 PM IST

ETV Bharat / state

ಕಲಬುರಗಿಯಲ್ಲಿ ಎಸಿಬಿ ದಾಳಿ: ಲಂಚ ಪಡೆಯುತ್ತಿದ್ದ ಮುಖ್ಯ ಅಭಿಯಂತರ ರೆಡ್​ ಹ್ಯಾಂಡಾಗಿ ಅರೆಸ್ಟ್​

ಕಲಬುರಗಿಯಲ್ಲಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ಧಾರೆ. ಈ ವೇಳೆ ಮುಖ್ಯ ಅಭಿಯಂತರ ಎಸಿಬಿ ಅಧಿಕಾರಿ ಬಲೆಗೆ ಬಿದ್ದಿದ್ದಾರೆ.

ACB Officers raid Kalburgi water department
ದಾಳೆ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಕಲಬುರಗಿ: ನಗರದಲ್ಲಿಂದು ಎಸಿಬಿ ದಾಳಿ ನಡೆದಿದೆ. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಚೇರಿಯ ಮುಖ್ಯ ಅಭಿಯಂತರ ರೆಡ್​ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಬಲೆಗೆ ಬಿದ್ದ ಕಲಬುರಗಿ ಮುಖ್ಯ ಅಭಿಯಂತರ ಅಧಿಕಾರಿ

ಮುಖ್ಯ ಅಭಿಯಂತರ ಜಿ.ಎಮ್. ನಾಗರಾಜು ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಕಚೇರಿಯಲ್ಲಿ ಕೊಪ್ಪಳದ ಯಶಸ್ವಿನಿ ಟೌನ್​​​ಶಿಪ್​​ ಪ್ರಾಜೆಕ್ಟ್ ಲಿಮಿಟೆಡ್​ನ ಎಂಡಿ ಅಣ್ಣಾ ಸಾಹೇಬ್ ಪಾಟೀಲ್ ಎನ್ನುವವರಿಂದ 1.5 ಲಕ್ಷ ಹಣ ಲಂಚ ಪಡೆಯುತ್ತಿದ್ದರು ಎನ್ನಲಾಗ್ತಿದೆ. ಈ ವೇಳೆ ನಾಗರಾಜು ರೆಡ್ ಹ್ಯಾಂಟ್ ಆಗಿ ಸಿಕ್ಕಿಬಿದ್ದಿದ್ದಾರೆ.

ಓದಿ: ಹಗರಣದ ಆರೋಪ ಹೊತ್ತವರಿಗೆ ಮತ್ತೆ ಮಂತ್ರಿಗಿರಿ.. ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ ಎಂದು ಶಾಸಕಿ ಬೇಸರ

ಲೇಔಟ್​​ನಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಕೆಲಸ ಮಾಡಿರುವ ಬಗ್ಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಅಧಿಕಾರಿ ನಾಗರಾಜ್, 3 ಲಕ್ಷ ಲಂಚಕ್ಕೆ ಅಣ್ಣಾ ಸಾಹೇಬ್ ಪಾಟೀಲ್ ಬಳಿ ಬೇಡಿಕೆ ಇಟ್ಟಿದ್ದತರಂತೆ. ಕೊನೆಗೆ 1.5 ಲಕ್ಷಕ್ಕೆ ಫೈನಲ್ ಮಾಡಿಕೊಂಡು ದುಡ್ಡು ಪಡೆಯುವಾಗ ಕಲಬುರಗಿ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣನವರ ನೇತೃತ್ವದ ತಂಡ ಏಕಾಏಕಿ ದಾಳಿ ನಡೆಸಿ ಅಧಿಕಾರಿಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details