ಕರ್ನಾಟಕ

karnataka

ETV Bharat / state

ಎಂಎಸ್​ಐಎಲ್​ ಶಾಖಾ ಕಚೇರಿ ಮೇಲೆ ಎಸಿಬಿ ದಾಳಿ ; 1.25 ಲಕ್ಷ ಅನಧಿಕೃತ ಹಣ ಪತ್ತೆ - anti corruption buroe

ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮಗಳ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ದಾಳಿ ಮಾಡಲಾಗಿದೆ..

ACB attack on MSIL office
ಎಂಎಸ್​ಐಎಲ್​ ಶಾಖಾ ಕಚೇರಿ ಮೇಲೆ ಎಸಿಬಿ ದಾಳಿ

By

Published : Sep 6, 2020, 9:17 PM IST

ಕಲಬುರಗಿ :ನಗರದ ಎಂಎಸ್​ಐಎಲ್ ಶಾಖಾ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಂಎಸ್​ಐಎಲ್​ ಶಾಖಾ ಕಚೇರಿ ಮೇಲೆ ಎಸಿಬಿ ದಾಳಿ

ಸರ್ದಾರ್ ಪಟೇಲ್ ವೃತ್ತದಲ್ಲಿರುವ ಎಂಎಸ್ಐಎಲ್ ಕಚೇರಿ ಮೇಲೆ ನಡೆದ ದಾಳಿ ವೇಳೆ 1.25 ಲಕ್ಷ ರೂಪಾಯಿ ಅನಧಿಕೃತ ಹಣ ಜಪ್ತಿ ಮಾಡಲಾಗಿದೆ. ಎಸಿಬಿ ಎಸ್ ಪಿ ಮಹೇಶ ಮೇಘಣ್ಣನವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮಗಳ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ.

ಎಂಎಸ್​ಐಎಲ್ ಶಾಖೆಯ ಮುಖ್ಯಸ್ಥ ಮತ್ತು ಸಿಬ್ಬಂದಿ ಬಳಿ ಅನಧಿಕೃತ ಮೊತ್ತ ಸಂಗ್ರಹಿಸಿರುವುದು ದಾಳಿ ವೇಳೆ ಪತ್ತೆಯಾಗಿದೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.

ABOUT THE AUTHOR

...view details