ಕರ್ನಾಟಕ

karnataka

ETV Bharat / state

ಕಲಬುರಗಿ: ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ - ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋತಂಗಲ್ ಬಳಿಯ ಕಾಗಿಣಾ ನದಿ ನೀರಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿದ್ದಾನೆ.

A youth washed away in rain water at Kalburgi
ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

By

Published : Jul 18, 2021, 10:07 PM IST

Updated : Jul 18, 2021, 10:50 PM IST

ಕಲಬುರಗಿ:ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಮಳೆ ನೀರಿನಲ್ಲಿ ಯುವಕ ಕೊಚ್ಚಿಕೊಂಡು ಹೋಗಿರುವ ಘಟನೆ ಚಿಂಚೋಳಿ ತಾಲೂಕಿನ ಪೋತಂಗಲ್ ಬಳಿಯ ಕಾಗಿಣಾ ನದಿಯಲ್ಲಿ ನಡೆದಿದೆ.

ಮಳೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಪ್ರಹ್ಲಾದ್ (30) ಯುವಕ ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು ನೀಡಗುಂದ, ಕೊಳ್ಳೂರು, ದೇಗಲಮಡಿ‌ ಒಳಗೊಂಡಂತೆ ಹತ್ತಾರು ಗ್ರಾಮಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ದಿನೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು ನೀರುಪಾಲಾಗಿವೆ.

ಗ್ರಾಮದ ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಹೊಲಗಳಲ್ಲಿ ಮೊಣಕಾಲು ಮಟ್ಟ ಮಳೆ ನೀರು ನಿಂತು ಹೊಲಗಳು ಕೆರೆಗಳಂತಾಗಿವೆ.

ಇದನ್ನೂಓದಿ: ಪಂಚಭೂತಗಳಲ್ಲಿ ಕಾವೇರಮ್ಮನ ಪುತ್ರರತ್ನ ಲೀನ.. ಮಾದೇಗೌಡರು ಮಂಡ್ಯ ಜನರಲ್ಲಿ ಅಜರಾಮರ..

Last Updated : Jul 18, 2021, 10:50 PM IST

ABOUT THE AUTHOR

...view details