ಕಲಬುರಗಿ: ಅಫಜಲಪುರ ತಾಲೂಕಿನ ರೇವೂರ ಗ್ರಾಮದ ಬಳಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ದೇಹ ಪತ್ತೆಯಾಗಿದ್ದು, ಕೊಲೆ ಮಾಡಿ ದೇಹಕ್ಕೆ ಬೆಂಕಿಯಿಟ್ಟು ಬಳಿಕ ದುಷ್ಕರ್ಮಿಗಳು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತಳನ್ನು ಸುಮಾರು 18 ವರ್ಷ ವಯಸ್ಸಿನ ಯುವತಿ ಎಂದು ಅಂದಾಜಿಸಲಾಗಿದೆ. ರೇವೂರ(ಬಿ) ಹಾಗೂ ಚಿಂಚೋಳಿ ಗ್ರಾಮದ ಹೆದ್ದಾರಿ ಬದಿ ಯುವತಿಯ ಶವ ಪತ್ತೆಯಾಗಿದೆ. ಮೃತದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಯುವತಿಯ ದೇಹ ಇರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.