ಕಲಬುರಗಿ :ಈಜಲು ಹೋದ ಯುವಕ ಹೊರಗೆ ಬಾರದೆ ನಾಪತ್ತೆಯಾದ ಘಟನೆ ಜಿಲ್ಲೆಯ ಚಿಂಚೋಳಿಯ ಚಂದ್ರಂಪಳ್ಳಿ ಡ್ಯಾಮ್‌ನಲ್ಲಿ ನಡೆದಿದೆ.
ಸೈಯದ್ ಅಹ್ಮದ್(17) ನೀರಿನಲ್ಲಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಹೈದ್ರಾಬಾದ್ ಮೂಲದ 8 ಜನರು ಚಿಂಚೋಳಿಗೆ ಮದುವೆಗೆಂದು ಆಗಮಿಸಿದ್ದರು.

ಈ ವೇಳೆ ಅವರು ಚಂದ್ರಂಪಳ್ಳಿ ಡ್ಯಾಮ್ ವೀಕ್ಷಣೆಗೆ ಬಂದಿದ್ದಾರೆ. ಉಳಿದವರು ಬೇಡ ಎಂದರೂ ಮೂವರು ನೀರಿಗೆ ಇಳಿದು ಈಜಾಡಿದ್ದಾರೆ.
ಆದ್ರೆ, ಇಬ್ಬರು ಮಾತ್ರ ಹೊರ ಬಂದಿದ್ದು ಸೈಯದ್ ಅಹ್ಮದ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಶೋಧಕಾರ್ಯ ನಡೆದಿದೆ.