ಕರ್ನಾಟಕ

karnataka

ETV Bharat / state

ಅಣ್ಣನ ಜೊತೆಗೆ ಅಕ್ರಮ ಸಂಬಂಧ ಆಪಾದನೆ: ಡೆತ್​​ನೋಟ್​​ ಬರೆದಿಟ್ಟು ಯುವತಿ ಆತ್ಮಹತ್ಯೆ - undefined

ಅಣ್ಣನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆಪಾದನೆಯಿಂದ ನೊಂದ ಯುವತಿವೋರ್ವಳು ಬಾರದಲೋಕಕ್ಕೆ ತೆರಳಿದ್ದಾಳೆ. ಚಲಿಸುತ್ತಿದ್ದ ಚಲಿಸುತ್ತಿದ್ದ ರೈಲಿಗೆ ಯುವತಿ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Kalburgi

By

Published : May 30, 2019, 7:43 PM IST

ಕಲಬುರಗಿ:ಅಣ್ಣನ ಜೊತೆ ಅಕ್ರಮ ಸಂಬಂಧದ ಆರೋಪ ಹೊರಿಸಿದ್ದಕ್ಕೆ ಬೇಸತ್ತ ಸಹೋದರಿವೋರ್ವಳು ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೇವರ್ಗಿ ರಸ್ತೆಯಲ್ಲಿರುವ ಮೇಲ್ಸೇತುವೆ ಬಳಿ ನಡೆದಿದೆ.

ವಿಜಯಪುರ ಮೂಲದ 21ರ ಹರೆಯದ ಯುವತಿ ಆತ್ಮಹತ್ಯೆಗೆ ಶರಣಾದವಳು. ಈಕೆ ರಾಯಚೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹದ ಬಳಿ ಡೆತ್​​ನೋಟ್ ಪತ್ತೆಯಾಗಿದ್ದು, ತನ್ನ ಸಾವಿಗೆ ಅತ್ತಿಗೆಯೇ ಕಾರಣವೆಂದು ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಶರಣಾದ ಯುವತಿ

ಅಣ್ಣನೊಂದಿಗೆ ಅಕ್ರಮ ಸಂಬಂಧ ಆರೋಪ ಹರಿಸಿ ಅತ್ತಿಗೆ ಸದಾ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸ್ವಂತ ಅಣ್ಣನೊಂದಿಗೆ ಸಂಬಂಧ ಕಲ್ಪಿಸಿ ನನ್ನ ಮಾನ ಹರಾಜು ಹಾಕಿದ ಅತ್ತಿಗೆಗೆ ತಕ್ಕ ಶಿಕ್ಷೆಯಾಗಲಿ ಎಂದು ಪತ್ರದಲ್ಲಿ ಯುವತಿ ಬರೆದಿದ್ದಾಳೆ ಎನ್ನಲಾಗ್ತಿದೆ.

ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details