ಕಲಬುರಗಿ: ವಿದ್ಯುತ್ ತಗುಲಿ ನರಳಾಡುತ್ತಿದ್ದ ಹಸು ರಕ್ಷಿಸಲು ಹೋಗಿ ಬಾಲಕ ಹಾಗೂ ಹಸು ಮೃತಪಟ್ಟಿರುವ ದಾರುಣ ಘಟನೆ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ನಡೆದಿದೆ.
ವಿದ್ಯುತ್ ಸ್ಪರ್ಶಿಸಿ ಬಾಲಕ, ಹಸು ಸಾವು
ವಿದ್ಯುತ್ ತಗುಲಿ ನರಳಾಡುತ್ತಿದ್ದ ಹಸು ರಕ್ಷಿಸಲು ಹೋಗಿ ಬಾಲಕ ಹಾಗೂ ಹಸು ಮೃತಪಟ್ಟಿರುವ ಧಾರುಣ ಘಟನೆ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ನಡೆದಿದೆ.
ಭೀರಣ್ಣ ಭೀಮಾಶಂಕರ (15) ಮೃತ ಬಾಲಕ. ಭೀರಣ್ಣ ಶಂಕರವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದನ ಮೇಯಿಸಲು ಹೋಗಿದ್ದ. ಈ ವೇಳೆ ಹಸುವೊಂದು ಹೆದ್ದಾರಿ ಪಕ್ಕದ ರಘೋಜಿ ಕಾರ್ಖಾನೆ ಕಂಪೌಂಡ್ ಗೋಡೆಯ ಮುಳ್ಳು ಕಂಟಿಗಳ ಮಧ್ಯೆ ಹೋಗಿ ವಿದ್ಯುತ್ ತಂತಿ ತುಳಿದು ನರಳಾಡುತ್ತಿತ್ತು. ಇದನ್ನು ಗಮನಿಸಿದ ಯುವಕ, ಹಸುವನ್ನು ರಕ್ಷಿಸಲು ಹೋಗಿ ತಾನೂ ಸಾವನ್ನಪ್ಪಿದ್ದಾನೆ.
ಮೃತ ಬಾಲಕನ ಪೋಷಕರ ಅಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು, ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.