ಕಲಬುರಗಿ: ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪಿದ್ದು,ನಾಲ್ವರು ಗಂಭೀರ ಗಾಯಗೊಂಡ ಘಟನೆ ಶಹಾಬಾದ್ ರಸ್ತೆಯ ಶೆಟ್ಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ನಡೆದಿದೆ.
ಕಲಬುರಗಿಯಲ್ಲಿ ಕಾರು ಪಲ್ಟಿಯಾಗಿ ಮಹಿಳೆ ಸಾವು, ನಾಲ್ವರಿಗೆ ಗಂಭೀರ ಗಾಯ
ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪಿದ್ದು,ನಾಲ್ವರು ಗಂಭೀರ ಗಾಯಗೊಂಡ ಘಟನೆ ಶಹಾಬಾದ್ ರಸ್ತೆಯ ಶೆಟ್ಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ನಡೆದಿದೆ.
accident_death
ಶಾಯಿದಾ ಭಾನು ಮೃತ ದುರ್ದೈವಿಯಾಗಿದ್ದು, ಅಬ್ದುಲ್ ಹಮೀದ್, ಕೈಸರ್ ಬೇಗಂ, ಸುರಯ್ಯ ಹಾಗೂ ಹನುಮಂತ್ ಎಂಬುವರಿಗೆ ಗಾಯಗಳಾಗಿವೆ. ಯಾದಗಿರಿಯಿಂದ ಕಲಬುರ್ಗಿಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡವರೆಲ್ಲರು ಯಾದಗಿರಿ ಮೂಲದವರು ಎಂದು ತಿಳಿದುಬಂದಿದೆ . ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕಅಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.