ಕಲಬುರಗಿ: ಬೆಟ್ಟಕ್ಕೆ ಸೀತಾಫಲ ಹಣ್ಣು ತರಲು ಹೋದ ಮಹಿಳೆ ನೀರುಪಾಲಾದ ಘಟನೆ ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾ ಬಳಿಯ ಹಳ್ಳದಲ್ಲಿ ನಡೆದಿದೆ.
ಹಣ್ಣು ತರಲು ಬೆಟ್ಟಕ್ಕೆ ಹೋಗಿದ್ದ ಮಹಿಳೆ ನೀರುಪಾಲು - Kalburgi lady Drown into Lake news
ಸೀತಾಫಲ ಹಣ್ಣು ತರಲು ಹೋದ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಆಕೆಯ ಶವ ಇಂದು ಪತ್ತೆಯಾಗಿದೆ.
ಬೆಟ್ಟಕ್ಕೆ ಹೋದ ಮಹಿಳೆ ನೀರುಪಾಲು
ಮರಗುತ್ತಿ ತಾಂಡಾ ನಿವಾಸಿ ಶಾಂತಾಬಾಯಿ (40) ಮೃತ ದುರ್ದೈವಿ. ಸೀತಾಫಲ ಹಣ್ಣು ತರಲು ಬೆಟ್ಟಕ್ಕೆ ಹೋಗಿದ್ದ ಮಹಿಳೆ ವಾಪಸ್ ಬರುವಾಗ ಹಳ್ಳದಲ್ಲಿ ನಿನ್ನೆ ಸಂಜೆ ಕೊಚ್ಚಿ ಹೋಗಿದ್ದಳು. ಇಂದು ನೀರಿನ ಮಟ್ಟ ಕಡಿಮೆಯಾದಾಗ ಹಳ್ಳದ ದಡದ ಮರದ ಕೊಂಬೆಯಲ್ಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.