ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ರೈತನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್​​ ಅಧಿಕಾರಿ! - ರೈತರಿಗೆ ಕಪಾಳಮೋಕ್ಷ

ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ಬೆಳಗ್ಗೆಯಿಂದ ರೈತ ಸಂಪರ್ಕ ಕೇಂದ್ರ ಬಳಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ರೈತರು ಜಮಾಯಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದೆ. ಆಗ ರೈತನಿಗೆ ಪೊಲೀಸ್​ ಅಧಿಕಾರಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.

ರೈತನಿಗೆ ಕಪಾಳಮೋಕ್ಷ ಮಾಡಿದ ಅಧಿಕಾರಿ

By

Published : Oct 9, 2019, 8:14 PM IST

ಯಾದಗಿರಿ: ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದ ರೈತರು ನೂಕುನುಗ್ಗಲು ಮಾಡಿದ್ದಾರೆ‌. ಈ ವೇಳೆ ರೈತನಿಗೆ ಪೊಲೀಸ್ ಅಧಿಕಾರಿಯೋರ್ವ ಕಪಾಳಮೋಕ್ಷ ಮಾಡಿರುವ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.

ರೈತನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್​ ಅಧಿಕಾರಿ

ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ಬೆಳಗ್ಗೆಯಿಂದ ರೈತ ಸಂಪರ್ಕ ಕೇಂದ್ರ ಬಳಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ರೈತರು ಜಮಾಯಿಸಿದ್ದರು. ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗದಿದ್ದಕ್ಕೆ ಸಾಲುಗಟ್ಟಿ ನಿಂತಿದ್ದ ರೈತರ ನಡುವೆ ನೂಕುನುಗ್ಗಲಾಗಿದೆ‌.

ರೈತರನ್ನು ನಿಯಂತ್ರಿಸಲು ಪೊಲೀಸ್​​ ಅಧಿಕಾರಿಯೋರ್ವ ರೈತನಿಗೆ ಕಪಾಳಮೋಕ್ಷ ಮಾಡಿದಲ್ಲದೆ, ಲಾಠಿ ರೂಚಿ ಸಹ ತೋರಿಸಿದ್ದಾನೆ. ಪೊಲೀಸ್ ಅಧಿಕಾರಿಯ ಈ ವರ್ತನೆ ರೈತರಲ್ಲಿ ಅಸಮಾಧಾನ ಮೂಡಿಸಿದೆ.

ABOUT THE AUTHOR

...view details