ಕರ್ನಾಟಕ

karnataka

ETV Bharat / state

ಸಿಬ್ಬಂದಿ ವೇತನ ದೋಚಿ ಪರಾರಿಯಾಗಿದ್ದ ಆರೋಪಿ ಅಂದರ್​! - Wadi Police Station

ಸಿಬ್ಬಂದಿ ವೇತನ ದೋಚಿ ಪರಾರಿಯಾಗಿದ್ದ ಕಲಬುರಗಿಯ ವಾಡಿ ಸಮುದಾಯ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕನನ್ನು ವಾಡಿ ಠಾಣೆಯ ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ.

A person arrest for payment golmal case
ಬಂಧಿತ ಆರೋಪಿ ಸಂತೋಷ್ ಕುಮಾರ್ ಕಟ್ಟೆ

By

Published : Jan 21, 2021, 7:11 AM IST

ಕಲಬುರಗಿ:ಸಿಬ್ಬಂದಿ ವೇತನ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ವಾಡಿ ಠಾಣೆಯ ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ್ ಕುಮಾರ್ ಕಟ್ಟೆ ಬಂಧಿತ ಆರೋಪಿ. ವಾಡಿ ಸಮುದಾಯ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಈತ, ಸಿಬ್ಬಂದಿ ವೇತನ ಮತ್ತು ಎಸ್ಆರ್ ಬುಕ್​ ಬರೆಯುತ್ತಿದ್ದ. ಆದರೆ, ಕಳೆದ ಜನವರಿ ತಿಂಗಳಿನಲ್ಲಿ ಆಡಳಿತಾಧಿಕಾರಿಗಳ ನಕಲಿ ಸಹಿ ಮತ್ತು ಸೀಲ್ ಮಾಡಿ, 38 ಸಿಬ್ಬಂದಿಯ 5.5 ಲಕ್ಷ ರೂ. ವೇತನವನ್ನು ತನ್ನ ಖಾತೆಗೆ ಜಮಾಮಾಡಿಕೊಂಡಿದ್ದ ಎನ್ನಲಾಗಿದೆ.

ಈ 38 ಸಿಬ್ಬಂದಿ ತಮ್ಮ ಖಾತೆಗೆ ವೇತನ ಜಮಾ ಆಗದಿದ್ದಾಗ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ವಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೀಜಿವುಲ್ಲಾ ಖಾದ್ರಿ, ಸಂತೋಷ್ ಕುಮಾರ್​ನನ್ನು ಕರೆಸಿ ವಿಚಾರಿಸಿದ್ದಾರೆ. ಈ ವೇಳೆ ಚೆಕ್​ ಕಳೆದು ಹೋಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಸಂತೋಷ್ ಕಟ್ಟುಕತೆ ಹೇಳಿದ್ದಾನೆ. ಅನುಮಾನಗೊಂಡ ವೈದ್ಯಾಧಿಕಾರಿ, ಚಿತ್ತಾಪುರ ಎಸ್‌ಟಿಒ ಕಚೇರಿಗೆ ಹೋಗಿ ವಿಚಾರಿಸಿದಾಗ ಈತನ ಅಸಲಿಯತ್ತು ಬಯಲಾಗಿದೆ.

ಓದಿ:13 ವರ್ಷದ ಬಾಲಕಿ ಮೇಲೆ ರೇಪ್​; ಕಲ್ಲುಗಳ ಮಧ್ಯೆ ಜೀವಂತ ಸಮಾಧಿ ಯತ್ನ!

ಈ ಬಗ್ಗೆ ವೈದ್ಯಾಧಿಕಾರಿ ಡಾ. ರೀಜಿವುಲ್ಲಾ ಖಾದ್ರಿ ಕಳೆದ ಫೆಬ್ರವರಿ ತಿಂಗಳಲ್ಲಿ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯ ತಿಳಿದು ತಲೆ ಮರೆಸಿಕೊಂಡಿದ್ದ ಆರೋಪಿ ಸಂತೋಷ್​, ಹೈದರಾಬಾದ್​ನಲ್ಲಿ ಬಲೂನ್​ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಈ ಬಗ್ಗೆ ತಿಳಿದ ವಾಡಿ ಠಾಣೆ ಪಿಎಸ್ಐ ವಿಜಯಕುಮಾರ ಆತನನ್ನು ಬಂಧಿಸಿ ಕಲಬುರಗಿಗೆ ಕರೆ ತಂದಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ABOUT THE AUTHOR

...view details