ಕಲಬುರಗಿ: ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ 2019 ರಿಂದ 2024ನೇ ಸಾಲಿನ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಸರ್ಕಾರ ಚಿಂತಿಸಿದೆ. ಇದು ಕೈಗಾರಿಕೋದ್ಯಮದ ಬೆಳವಣಿಗೆಗೆ ಮಾರಕವಾಗಲಿದೆ ಎಂಬುದು ಉದ್ಯಮಿಗಳ ಆಕ್ರೋಶ.
ಕೈಗಾರಿಕಾ ಬೆಳವಣಿಗೆಗೆ ಮಾರಕ ನೂತನ ಕೈಗಾರಿಕಾ ನೀತಿ? - ನೂತನ ಕೈಗಾರಿಕಾ ನೀತಿ
ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ವಲಯಕ್ಕೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕೈಗಾರಿಕಾ ಬೆಳವಣಿಗೆಗೆ ಮಾರಕ ನೂತನ ಕೈಗಾರಿಕಾ ನೀತಿ?
ಕಲ್ಯಾಣ ಕರ್ನಾಟಕ ಭಾಗವನ್ನು ಕೈಗಾರಿಕಾ ವಲಯ-1 ರಲ್ಲಿ ಸೇರಿಸಲಾಗಿತ್ತು. ಇದ್ರಿಂದ ಒಂದಷ್ಟು ಉತ್ತೇಜನಗಳು ಸಿಗುವ ನಿರೀಕ್ಷೆ ಗರಿಗೆದರಿತ್ತು. ಈಗ ವಲಯ-1 ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಮುಂಬೈ ಕರ್ನಾಟಕದ ಕೆಲವು ಜಿಲ್ಲೆಗಳ ಸೇರ್ಪಡೆಗೆ ಹುನ್ನಾರ ನಡೆದಿದೆಯಂತೆ. ಇದರಿಂದ ಮೊದಲೇ ಕೈಗಾರಿಕೆಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂಬುದು ಹೋರಾಟಗಾರರ ಅಂಬೋಣ.
ಹೀಗಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಮತ್ತೆ ಮಲತಾಯಿ ಧೋರಣೆ ಮಾಡ್ತಿರೋದನ್ನು ಸರ್ಕಾರ ಕೈಬಿಡಬೇಕೆಂಬುದೇ ಕಲ್ಯಾಣ ಕರ್ನಾಟಕ ಜನರ ಆಗ್ರಹ.