ಕರ್ನಾಟಕ

karnataka

ETV Bharat / state

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಕಲಬುರಗಿ ಡಿಸಿ: ಇನ್ಮುಂದೆ ನಡೆಯೋಲ್ಲ ಕಾರ್ಖಾನೆಯವರ ಆಟ

ಮೂರ್ನಾಲ್ಕು ತಿಂಗಳು ತಡವಾಗಿ ಕಬ್ಬು ಕಟಾವು ಮಾಡುವುದರಿಂದ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಕಬ್ಬು ಕಟಾವು ವಿಚಾರದಲ್ಲಿ ಕಾರ್ಖಾನೆಯ ಕೆಲ ಅಧಿಕಾರಿಗಳು ರೈತರನ್ನು ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳಿವೆ. ಹೀಗಾಗಿ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿವರ್ಷ ನಷ್ಟ ಅನುಭವಿಸುತ್ತಲೇ ಇದ್ದಾರೆ. ಇದನ್ನೇ ಮನಗಂಡ ಕಲಬುರಗಿ ನೂತನ ಜಿಲ್ಲಾಧಿಕಾರಿ ಯಶವಂತ ಗುರುಕರ್, ಕಬ್ಬು ಕಟಾವು ತೊಂದರೆಗೆ ಮುಕ್ತಿ ಹೊಸ ಆಲೋಚನೆಗೆ ಕೈಹಾಕಿದ್ದಾರೆ.

By

Published : Mar 24, 2022, 4:01 PM IST

Updated : Mar 24, 2022, 5:00 PM IST

ಕಬ್ಬು ಬೆಳೆಗಾರರಿಗೆ ಸಿಹಿಯಾದ ಸುದ್ದಿ ಕೊಟ್ಟ ಡಿಸಿ
ಕಬ್ಬು ಬೆಳೆಗಾರರಿಗೆ ಸಿಹಿಯಾದ ಸುದ್ದಿ ಕೊಟ್ಟ ಡಿಸಿ

ಕಲಬುರಗಿ: ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಆಗದೆ ಬಿಸಿಲೂರು ಕಲಬುರಗಿ ಜಿಲ್ಲೆಯ ರೈತರು ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಕೆಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರ ದರ್ಬಾರ್​ಗೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುವಂತಾಗಿದೆ. ಸಕ್ಕರೆ ಕಾರ್ಖಾನೆಗಳ ಈ ರೀತಿಯ ವರ್ತನೆಗೆ ಬಿಸಿ ಮುಟ್ಟಿಸಿರೋ ಜಿಲ್ಲಾಧಿಕಾರಿ, ಕಬ್ಬು ಕಟಾವು ಸಮಸ್ಯೆ ನಿವಾರಣೆಗೆ ಹೊಸ ಪ್ಲಾನ್ ರೂಪಿಸುತ್ತಿದ್ದಾರೆ.

ರೈತರ ಸಂಕಷ್ಟದೊಂದಿಗೆ ಕಾರ್ಖಾನೆ ಸಿಬ್ಬಂದಿ ಚೆಲ್ಲಾಟ: ತೊಗರಿ ನಾಡು ಬಿಸಿಲೂರು ಕಲಬುರಗಿ ಜಿಲ್ಲೆಯ ರೈತರ ಪಾಲಿಗೆ ಕಬ್ಬು ವಾಣಿಜ್ಯ ಬೆಳೆ. ಬೆಳೆದ್ರೆ ಕೈತುಂಬ ಕಾಸು ಸಿಗುತ್ತೆ ಅಂತಾ ಭಾಗಶಃ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಆದ್ರೆ, ಬೆಳೆದಿರುವ ಕಬ್ಬು ಮಾರಾಟ ಮಾಡೋದು ಮಾತ್ರ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳೆನೋ ಕಬ್ಬು ಖರೀದಿಸುವುದಾಗಿ ರೈತರಿಗೆ ಭರವಸೆ ಕೊಟ್ಟು ಅಗ್ರಿಮೆಂಟ್, ಭರವಸೆ ಕೂಡ ಕೊಡುತ್ತಿವೆ. ಯಾವಾಗ ಕಬ್ಬು ಬೆಳೆದು ಕಟಾವಿಗೆ ಬರುತ್ತೋ ಆಗ ಸಕ್ಕರೆ ಕಾರ್ಖಾನೆಗಳು ಟೈಂಗೆ ಸರಿಯಾಗಿ ಕಬ್ಬು ಕಟಾವು ಮಾಡದೆ ರೈತರ ಜೊತೆ ಚೆಲ್ಲಾಟ ಆಡ್ತಿವೆ ಎಂಬ ಆರೋಪಗಳಿವೆ.

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಕಲಬುರಗಿ ಡಿಸಿ

ರೈತರು ನಷ್ಟ ಅನುಭವಿಸುತ್ತಿದ್ದರು:ಮೂರ್ನಾಲ್ಕು ತಿಂಗಳು ತಡವಾಗಿ ಕಬ್ಬು ಕಟಾವು ಮಾಡುವುದರಿಂದ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಕಬ್ಬು ಕಟಾವು ವಿಚಾರದಲ್ಲಿ ಕಾರ್ಖಾನೆಯ ಕೆಲ ಅಧಿಕಾರಿಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಹೀಗಾಗಿ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿವರ್ಷ ನಷ್ಟ ಅನುಭವಿಸುತ್ತಲೇ ಇದ್ದಾರೆ. ಇದನ್ನೇ ಮನಗಂಡ ಕಲಬುರಗಿ ನೂತನ ಜಿಲ್ಲಾಧಿಕಾರಿ ಯಶವಂತ ಗುರುಕರ್, ಕಬ್ಬು ಕಟಾವು ತೊಂದರೆಗೆ ಮುಕ್ತಿ ದೊರಕಿಸಲು ಹೊಸ ಆಲೋಚನೆಗೆ ಕೈಹಾಕಿದ್ದಾರೆ.

ಡಿಸಿಯಿಂದ ನೋಟಿಸ್​:ರೈತರು ಎಕರೆಗೆ ಸಾವಿರಾರು ರೂಪಾಯಿ ಖರ್ಚಿನ ಮೂಲಕ ಸಾಲ ಮಾಡಿಕೊಂಡು ವರ್ಷವಿಡೀ ಬೆವರು ಸುರಿಸಿ ಒಳ್ಳೆಯ ಇಳುವರಿ ಕಬ್ಬು ಬೆಳೆದರೂ ಕೆಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರ ಅಂಧಾ ದರ್ಬಾರ್​ಗೆ ಅನ್ನದಾತರನ್ನ ಹಿಂಡಿ ಹಿಪ್ಪೆ ಮಾಡುತ್ತಿವೆ‌. ಕಬ್ಬು ಬೆಳೆಗಾರರು ಸಮಸ್ಯೆ, ಗೋಳು ಆಲಿಸಿರೋ ಜಿಲ್ಲಾಧಿಕಾರಿ ಗುರುಕರ್, ಸಕ್ಕರೆ ಫ್ಯಾಕ್ಟರಿ ಆಡಳಿತ ಮಂಡಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.

ಇನ್ಮುಂದೆ ಕಬ್ಬು ಕಟಾವು ಸಮಸ್ಯೆ ಆಗಬಾರದೆಂದು ಜಿಲ್ಲಾಡಳಿತ ಆ್ಯಪ್ ಸಿದ್ಧ ಮಾಡಲು ಮುಂದಾಗಿದೆ. ಯಾವ ದಿನಾಂಕದಂದು ಯಾವ ಊರಿನಲ್ಲಿ ಯಾವ ರೈತರ ಕಬ್ಬು ಕಟಾವು ಮಾಡಲಾಗುತ್ತದೆ ಅನ್ನೋ ಕುರಿತಾದ ಮಾಹಿತಿಯನ್ನು ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಹಾಗು ರೈತರಿಗೆ ಏಕಕಾಲದಲ್ಲಿ ಸಂದೇಶ ರವಾನೆ ಆಗಲಿದೆ. ಈ ಆ್ಯಪ್ ಮೂಲಕ, ರೈತರು ತಮ್ಮ ಜಮೀನಿನ ಸರ್ವೇ ಸಂಖ್ಯೆ ಜೊತೆಗೆ ಕಬ್ಬು ಕಟಾವಿಗೆ ವೈಯಕ್ತಿಕ ವಿವರದೊಂದಿಗೆ ಮನವಿ ಸಲ್ಲಿಸಬೇಕು. ಈ ಮಾಹಿತಿ ಸಕ್ಕರೆ ಕಾರ್ಖಾನೆ ಮತ್ತು ಜಿಲ್ಲಾಡಳಿತಕ್ಕೆ ಏಕಕಾಲದಲ್ಲಿ ರವಾನೆಯಾಗಲಿದ್ದು, ಸಕ್ಕರೆ ಕಾರ್ಖಾನೆಯವರು ಕ್ಷೇತ್ರಕ್ಕೆ ಹೋಗಿ ಕಟಾವು ಮಾಡಿಕೊಳ್ಳುತ್ತಾರೆ. ಈ ರೀತಿಯ ತಂತ್ರಾಂಶ ಕಾರ್ಯನಿರ್ವಹಿಸಲಿದ್ದು, ಜಿಲ್ಲಾಡಳಿತ ನಿಗಾ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ಸಹಾಯವಾಣಿ: ಆ್ಯಪ್ ಅಲ್ಲದೆ ರೈತರಿಂದ ಕಬ್ಬು ಕಟಾವು ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಸ್ಥಾಪಿಸಲಾಗ್ತಿದೆ‌. ಜಿಲ್ಲೆಯಾದ್ಯಂತ ಸಾಮಾಜಿಕ ಪಿಂಚಣಿ ಕುರಿತ ಸಮಸ್ಯೆ ಮತ್ತು ದೂರುಗಳನ್ನು ಆಲಿಸಲು ಟೋಲ್-ಫ್ರೀ ಸಹಾಯವಾಣಿ ಕೂಡ ಸ್ಥಾಪಿಸಲು ಪ್ಲಾನ್ ಮಾಡಲಾಗಿದೆ. ದೂರು ಬಂದ 72 ಗಂಟೆಗಳಲ್ಲಿ ಸಮಸ್ಯೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ. ಒಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳ ಕೆಟ್ಟ ವರ್ತನೆಗೆ ಕಲಬುರಗಿ ಕಬ್ಬು ಬೆಳೆಗಾರರು ಅಕ್ಷರಶಃ ರೋಸಿ ಹೋಗಿದ್ದರು. ಕಬ್ಬು ಕಟಾವಿನ ಜೊತೆಗೆ ಹಣದ ತೊಂದರೆಯನ್ನೂ ಸಹ ರೈತರು ಎದುರಿಸುತ್ತಿದ್ದಾರೆ. ಸದ್ಯ ಕಬ್ಬು ಬೆಳೆಗಾರರ ತೊಂದರೆಗೆ ಬ್ರೇಕ್ ಹಾಕಿ, ರೈತರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಜಿಲ್ಲಾಡಳಿತ ಕೈಗೊಂಡಿರೋ ಕ್ರಮ ಎಷ್ಟು ಫಲ ನೀಡಲಿದೆ ಅನ್ನೋದು ಮುಂದಿನ ವರ್ಷ ಗೊತ್ತಾಗಲಿದೆ.

Last Updated : Mar 24, 2022, 5:00 PM IST

For All Latest Updates

TAGGED:

ABOUT THE AUTHOR

...view details