ಕಲಬುರಗಿ:ರಾತ್ರಿ ಮಲಗಿದ್ದ ವೇಳೆ ತೆಲೆ ಮೇಲೆ ಕಲ್ಲು ಹಾಕಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿಯ ಭರತ್ ನಗರ ತಾಂಡಾದಲ್ಲಿ ನಡೆದಿದೆ. ಲಕ್ಷ್ಮಣ ಚವ್ಹಾಣ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಲಕ್ಷ್ಮಣ ಚವ್ಹಾಣ ಕಳೆದ ಕೆಲ ವರ್ಷಗಳಿಂದ ಪ್ಯಾರೆಲೇಸಿಸ್ ಅಟ್ಯಾಕ್ ಆಗಿದ್ದರಿಂದ ನಡೆದಾಡಲು ಆಗ್ತಿರಲಿಲ್ಲ, ಆದರೂ ಕುಳಿತುಕೊಂಡು ಸರಿದಾಡುತ್ತಲೇ ಕೊಂಚ ದೂರದವರೆಗೆ ಹೋಗುತ್ತಿದ್ದ, ಮೃತ ಲಕ್ಷ್ಮಣ ಸಹೋಧರನ ಮಗನ ಮದುವೆ ಸಂಭ್ರಮ ಮನೆಯಲ್ಲಿ ಕಳೆಗಟ್ಟಿತ್ತು.
ಮದುವೆ ಕಾರ್ಯಕ್ರಮದ ಹಿನ್ನೆಲೆ ಮನೆಯಲ್ಲಿ ನಿನ್ನೆ ಮಧ್ಯರಾತ್ರಿ 2 ಗಂಟೆವರೆಗೆ ಕುಟುಂಬಸ್ಥರು ಕುಣಿದು ಸಂಭ್ರಮಿಸಿದ್ದಾರೆ. ಲಕ್ಷ್ಮಣ ಕೂಡಾ ಪಾಲ್ಗೊಂಡು ಸಂಭ್ರಮಿಸಿದ್ದಾನೆ. ಬಳಿಕ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಲಕ್ಷ್ಮಣ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ರೀತಿಯಲ್ಲಿ ಶವ ಪತ್ತೆ ಆಗಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
19 ಸಾವಿರ ಹಣಕ್ಕಾಗಿ ವ್ಯಕ್ತಿಗೆ ಚಾಕು ಇರಿತ:ಮತ್ತೊಂದು ಪ್ರಕರಣದಲ್ಲಿಕಲಬುರಗಿಯ ಗಂಗಾ ನಗರದಲ್ಲಿ ಈರಣ್ಣ ಹಳ್ಳಿ(55) ಎಂಬ ಆಟೋ ಚಾಲಕನ ಮೇಲೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಸೋಮು ಅಡಗಲ್ ಎಂಬಾತ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸೋಮು ಬಳಿ, ಗಾಯಾಳು ಈರಣ್ಣ ಹಣ ಪಡೆದಿದ್ದನಂತೆ, ಬಡ್ಡಿ ಸಮೇತ ಹಣ ವಾಪಸ್ ಕೊಟ್ಟರೂ ಇನ್ನೂ 19 ಸಾವಿರ ಬಾಕಿ ಇದೆ ಕೊಡು ಅಂತ ಪಿಡಿಸುತಿದ್ದನಂತೆ, ಇದೆ ವಿಚಾರವಾಗಿ ಈ ಮುಂಚೆ ಗಲಾಟೆಗಳು ಆಗಿವೆ.