ಕರ್ನಾಟಕ

karnataka

ETV Bharat / state

ಪತ್ನಿ ಜೊತೆಗಿನ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ, ಬೆದರಿಕೆ ಆರೋಪ: ಐಪಿಎಸ್​ ಅಧಿಕಾರಿ ವಿರುದ್ಧ ಹೆಡ್​​ಕಾನ್ಸ್​ಟೇಬಲ್ ದೂರು - ಪ್ರಕರಣ ಕುರಿತಾಗಿ ಐಪಿಎಸ್ ಅಧಿಕಾರಿ ಪ್ರತಿಕ್ರಿಯೆ

ನನ್ನ ಪತ್ನಿ ಜೊತೆ ಸಂಬಂಧ ಹೊಂದಿದ್ದಲ್ಲದೇ, ಪ್ರಶ್ನಿಸಿದ್ದಕ್ಕೆ ಪತ್ನಿ ಮತ್ತು ಐಪಿಎಸ್​ ಅಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹೆಡ್​ಕಾನ್ಸ್​ಟೇಬಲ್ ​ಒಬ್ಬರು ದೂರು ನೀಡಿದ್ದಾರೆ. ಆದ್ರೆ ಈ ಆರೋಪವನ್ನು ಐಪಿಎಸ್ ಅಧಿಕಾರಿ ತಳ್ಳಿಹಾಕಿದ್ದಾರೆ.

ಐಪಿಎಸ್​ ಅಧಿಕಾರಿ ವಿರುದ್ಧ ಹೆಡ್​​ಕಾನ್ಸ್​ಟೇಬಲ್ ದೂರು
ಐಪಿಎಸ್​ ಅಧಿಕಾರಿ ವಿರುದ್ಧ ಹೆಡ್​​ಕಾನ್ಸ್​ಟೇಬಲ್ ದೂರು

By

Published : Mar 13, 2023, 5:48 PM IST

Updated : Mar 13, 2023, 6:58 PM IST

ಕಲಬುರಗಿ:ಐಪಿಎಸ್ ಅಧಿಕಾರಿ ಮತ್ತು ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಲ್ಲದೇ, ಇದನ್ನು ಪ್ರಶಿಸಿದ್ದಕ್ಕೆ ನನ್ನ ಮೇಲೆಯೇ ಇಬ್ಬರೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯ ಪತಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಹೆಡ್​ಕಾನ್ಸ್​​ಟೇಬಲ್ ಕೆಂಟೆಪ್ಪ ಎಂಬುವವರು ನೀಡಿದ ದೂರಿನ ಮೇರೆಗೆ ಇಂಟರ್‌ನಲ್ ಸೆಕ್ಯೂರಿಟಿ ಡಿವಿಜನ್ (ಐಎಸ್‌ಡಿ) ಎಸ್​ಪಿ ಅರುಣ್ ರಂಗರಾಜನ್ ಮತ್ತು ಇದೇ ಇಲಾಖೆಯಲ್ಲಿ ಎಎಸ್​​ಐ ಆಗಿರುವ ಪತ್ನಿ ವಿರುದ್ಧ ಸ್ಟೇಷನ್​​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಿರುವ ವ್ಯಕ್ತಿ ಪೊಲೀಸ್ ಹೆಡ್​ಕಾನ್ಸ್​ಟೇಬಲ್ ಆಗಿದ್ದು, ಇವರ ಪತ್ನಿ ಐಎಸ್​ಡಿಯಲ್ಲಿ ಎಎಸ್​ಐ ಆಗಿದ್ದಾರೆ.

ಪತ್ನಿ ವಿರುದ್ಧವೂ ಪತಿ ದೂರು:ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡ ಪೊಲೀಸ್ ಇಲಾಖೆಯಲ್ಲಿರುವುದರಿಂದ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಇತ್ತೀಚೆಗೆ ಐಪಿಎಸ್ ಅಧಿಕಾರಿ ಜೊತೆ ನನ್ನ ಪತ್ನಿ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ದೃಢಪಟ್ಟಿದೆ. ಈ ಬಗ್ಗೆ ಪ್ರಶ್ನಿಸಿದ್ರೆ ನನ್ನ ಮೇಲೆಯೇ ಇಬ್ಬರೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ತಮ್ಮ ಅಧಿಕಾರ ಬಳಸಿ ಕೆಳ ಹಂತದ ಸಿಬ್ಬಂದಿ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ನನ್ನ ಪತ್ನಿಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅಧಿಕಾರಿಗೆ ನನ್ನ ಹೆಂಡತಿ ಕೂಡ ಸಾಥ್ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ನನ್ನ ಪತ್ನಿ ಮನೆಯಲ್ಲಿದ್ದ ಮೊಬೈಲ್ ಮತ್ತು ಚಿನ್ನಾಭರಣಗಳನ್ನು ಕೂಡ ಕಳ್ಳತನ ಮಾಡಿಕೊಂಡಿ ಹೋಗಿದ್ದಾಳೆ. ಇದರಿಂದಾಗಿ ನನ್ನ ಮಾನಹಾನಿಯಾಗಿ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದು ಪತಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಡೆಲಿವರಿ ಬಾಯ್ಸ್ ಪರಾರಿ

ದೂರಿನ‌ ಅನ್ವಯ ಅನೈತಿಕ ಸಂಬಂಧ, ಹಲ್ಲೆ, ಕೊಲೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 324, 498, 376(2)(b), 342, 504, 506(2), 507, 420, 406, 500, 201, 109, 457 ಅಡಿಯಲ್ಲಿ ಎಪ್​​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಮುತ್ತಿನ ನಗರಿಯಲ್ಲಿ ವಿದ್ಯಾರ್ಥಿ ಜೊತೆ ಶಿಕ್ಷಕಿ ನಾಪತ್ತೆ.. ಎರಡು ದಿನಗಳ ಬಳಿಕ ವಾಪಸ್ ಬಂದು ಹೇಳಿದ್ದೇನು​!?

ಐಪಿಎಸ್​ ಅಧಿಕಾರಿಯಿಂದ ಸ್ಪಷ್ಟನೆ:ಪ್ರಕರಣ ಕುರಿತಾಗಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಪ್ರತಿಕ್ರಿಯೆ ನೀಡಿದ್ದು, ಯಾರ ಹೆಂಡತಿಯನ್ನ ಯಾರು ಕೂಡಿ ಹಾಕಲು ಸಾಧ್ಯವಿಲ್ಲ. ತನ್ನ ಹೆಂಡತಿಯನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಒಬ್ಬ ಗಂಡನ ಜವಾಬ್ದಾರಿ. ಇಟ್ಟುಕೊಳ್ಳಲಿಲ್ಲ ಅಂದ್ರೆ ಎಲ್ಲಿ ಬೇಕು ಅಲ್ಲಿ ಹೋಗುತ್ತಾರೆ. ಅವರ ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಎಲ್ಲಿ ಹೋಗಿ ಹುಡುಕಬೇಕೋ ಅಲ್ಲಿ ಹುಡುಕಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಪೊಲೀಸ್ ಠಾಣೆ ಮೆಟ್ಟಿಲೇರಿದ ನೊಂದ ಪತಿ

Last Updated : Mar 13, 2023, 6:58 PM IST

ABOUT THE AUTHOR

...view details