ಕಲಬುರಗಿ: ಕುಡಿಯಲು ಹಣ ಕೊಡಲಿಲ್ಲ ಎಂದು ಹೆತ್ತ ಮಗನೇ ಹೆತ್ತ ತಾಯಿ ತೆಲೆಯ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಕೊಲೆಗೈದು ಜೈಲು ಸೇರಿದ ಘಟನೆ ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ನಡೆದಿದೆ.
ಎಣ್ಣೆ ಕುಡಿಯಲು ಹಣ ಕೊಡಲಿಲ್ಲ ಎಂದು ಹಾಲು ಕುಡಿಸಿ ಸಲುಹಿದ ಹೆತ್ತಮ್ಮನ ಕೊಂದ ಕ್ರೂರಿ
ಕ್ರೂರಿ ಮಗನೋರ್ವ ನಿತ್ಯ ಕುಡಿಯಲು ಹಣ ನೀಡುವಂತೆ ಪಿಡಿಸುತ್ತಿದ್ದ ಎನ್ನಲಾಗಿದೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹೆತ್ತವ್ವ ಎನ್ನುವದನ್ನೂ ನೋಡದೆ ತಲೆ ಮೇಲೆ ಕಲ್ಲುಹಾಕಿ ಹತ್ಯೆ ಮಾಡಿದ್ದಾನೆ.
ಹೆತ್ತಮ್ಮನ ಕೊಂದ ಕ್ರೂರಿ
ಯಲ್ಲವ್ವ ದೊಡ್ಮನಿ (70) ಕೊಲೆಗೀಡಾದ ಮಹಿಳೆ. ಹಣಮಂತ ದೊಡ್ಡಮನಿ ಕೊಲೆಗೈದ ಕ್ರೂರಿ ಮಗ. ಹಣಮಂತ ನಿತ್ಯ ತನ್ನ ತಾಯಿಗೆ ಕುಡಿಯಲು ಹಣ ನೀಡುವಂತೆ ಪಿಡಿಸುತ್ತಿದ್ದ ಎನ್ನಲಾಗಿದೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹೆತ್ತವ್ವ ಎನ್ನುವುದನ್ನೂ ನೋಡದೆ ತಲೆ ಮೇಲೆ ಕಲ್ಲುಹಾಕಿ ಹತ್ಯೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಎಸ್ಪಿ ಸೀಮಿ ಮರಿಯಮ್ ಜಾರ್ಜ್, ಡಿವೈಎಸ್ಪಿ ತಾಯಪ್ಪ ದೊಡ್ಮನಿ, ಸಿಪಿಐ ರಮೇಶ ರೊಟ್ಟಿ, ಪಿಎಸ್ಐ ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.