ಕಲಬುರಗಿ: ಕೇವಲ ನಾಲ್ಕು ಸಾವಿರ ರೂಪಾಯಿಗಾಗಿ ವ್ಯಕ್ತಿಯೋರ್ವ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ-ಆಲಗೂಡ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಕಲಬುರಗಿಯ ರಾಮನಗರ ನಿವಾಸಿ ಸಂತೋಷ ಹೂಗಾರ್ (28) ಕೊಲೆಯಾದ ಯುವಕ.
ಈತ ತನ್ನ ಸ್ನೇಹಿತ ಶಿವಾಜಿಗೆ 4 ಸಾವಿರ ರೂ. ಸಾಲವಾಗಿ ಕೊಟ್ಟಿದ್ದನಂತೆ. ಈ ಹಣವನ್ನು ತಿಂಗಳುಗಳೇ ಉರುಳಿದರೂ ಆತ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ, ಹಣ ಕೊಡುವಂತೆ ಸಂತೋಷ್ ಶಿವಾಜಿಯನ್ನು ಕೇಳಿದ್ದಾನೆ. ಹಣ ಕೊಡದಿದ್ದರೆ ಹುಡುಗರಿಂದ ಹೊಡೆಸುವುದಾಗಿ ಹೆದರಿಸಿದ್ದನಂತೆ.
ಇದರಿಂದ ಕೋಪಗೊಂಡ ಶಿವಾಜಿ, ತನ್ನ ಇನ್ನೊಬ್ಬ ಸ್ನೇಹಿತ ಅರುಣಕುಮಾರನೊಂದಿಗೆ ಸೇರಿ ಸಂತೋಷನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಡಾಬಾವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ.