ಕಲಬುರಗಿ: ಕೊರೊನಾ ತಪಾಸಣೆಗೆಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆ ಆವರಣದಲ್ಲಿಯೇ ಮೃತಪಟ್ಟಿರುವ ಕರುಣಾಜನಕ ಘಟನೆ ಅಫಜಲಪುರನಲ್ಲಿ ನಡೆದಿದೆ.
ಸೋಮನಾಥ್ ನಂದಾಗೊಳ (55) ಮೃತ ವ್ಯಕ್ತಿ. ಶನಿವಾರ ಸಂಜೆ ಆಸ್ಪತ್ರೆಗೆ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಬಂದಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಾಳೆ(ಸೋಮವಾರ) ಮಗಳ ನಿಶ್ಚಿತಾರ್ಥ ಇತ್ತು. ಆದರೆ, ಅನಾರೋಗ್ಯದ ಹಿನ್ನಲೆ ಚಿಕಿತ್ಸೆ ಪಡೆಯಲು ತಾಲೂಕಾಸ್ಪತ್ರೆಗೆ ಬಂದಾದ ಘಟನೆ ನಡೆದಿದೆ.