ಕಲಬುರಗಿ: ನಗರದ ಹೊರವಲಯ ಬೋಸಗಾ ಕ್ರಾಸ್ ಬಳಿ ಯುವಕನ ಶವ ಪತ್ತೆಯಾಗಿದೆ. ಮೃತನನ್ನು ಕಲಬುರಗಿಯ ಫಿಲ್ಟರ್ ಬೆಡ್ ನಿವಾಸಿ ಗೋಪಾಲ್ (22) ಎಂದು ಗುರುತಿಸಲಾಗಿದೆ.
ಕಲಬುರಗಿ ನಗರದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ - ಕಲಬುರಗಿಯಲ್ಲಿ ಯುವಕ ಸಾವು ಸುದ್ದಿ
ಕಲಬುರಗಿ ನಗರದ ಹೊರವಲಯ ಬೋಸಗಾ ಕ್ರಾಸ್ ಬಳಿ ಯುವಕನ ಶವ ಪತ್ತೆಯಾಗಿದೆ.
ಯುವಕನ ಶವ ಪತ್ತೆ
ಕೊಲೆ ಅಥವಾ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ. ಮೈಮೇಲೆ ಯಾವುದೇ ಗಂಭೀರ ಗಾಯಗಳು ಕೂಡ ಕಂಡುಬಂದಿಲ್ಲ. ನಿನ್ನೆ ಪಟ್ಟಣ ಎಂಬ ಗ್ರಾಮಕ್ಕೆ ಹೋಗಿದ್ದನಂತೆ. ಮರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ಕೂಡಾ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತನ ಸಂಬಂಧಿಕರು ಬಂದ ನಂತರ ಕೊಲೆ ಅಥವಾ ರಸ್ತೆ ಅಪಘಾತ ಪ್ರಕರಣ ದಾಖಲಾಗಲಿದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.