ಕಲಬುರಗಿ: ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ 12 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ತೀರ್ಪು ಹೊರಡಿಸಿದೆ.
ಜೇವರ್ಗಿ ತಾಲೂಕು ಬೆಣ್ಣೂರ ಗ್ರಾಮದ ಚಂದ್ರಕಾಂತ್ ಅಲಿಯಾಸ್ ಕಾಂತು ಕವಲ್ದಾರ (24) ಶಿಕ್ಷೆಗೆ ಗುರಿಯಾದ ಆರೋಪಿ, ಈತ 12 ವರ್ಷದ ಬಾಲಕಿ ಜೊತೆಗೆ ಪ್ರೀತಿಯ ನಾಟಕವಾಡಿ 2017 ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಅಪಹರಿಸಿದ್ದ, ಬಳಿಕ ಬೆಂಗಳೂರು ಸೇರಿದಂತೆ ಇತರೆಡೆ ಕರೆದೊಯ್ದು ನಿರಂತರ ಅತ್ಯಾಚಾರಗೈದಿದ್ದ.