ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತಿದಕ್ಕೆ ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಗ್ರಾ.ಪಂ.ಚುನಾವಣೆಯಲ್ಲಿ ಸೋತಿದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ - ಕಲಬುರಗಿ ಲೇಟೆಸ್ಟ್ ನ್ಯೂಸ್
ಗ್ರಾ.ಪಂ.ಚುನಾವಣೆಯಲ್ಲಿ ಸೋತಿದಕ್ಕೆ ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಿಬಸಪ್ಪ ಪಾಟೀಲ್ ಕುಗನನೂರ್
ಇಟಗಿ ಗ್ರಾಮದ ಕರಿಬಸಪ್ಪ ಪಾಟೀಲ್ ಕುಗನನೂರ್ (64) ಮೃತ ವ್ಯಕ್ತಿ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕೆ ಇಳಿಸಿದ್ದ ಕರಿಬಸಪ್ಪ ಸೋಲು ಅನುಭವಿಸಿದ್ದರು. ಅಲ್ಲದೇ, ಒಂದಿಷ್ಟು ಕೈಸಾಲ ಕೂಡಾ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಕರಿಬಸಪ್ಪ ಇಟಗಿ ಬಳಿ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಕ್ಕಿ ರಭಸಕ್ಕೆ ಮೃತದೇಹ ಸಂಪೂರ್ಣ ಚಿದ್ರಗೊಂಡಿದೆ. ಸ್ಥಳದಲ್ಲಿ ಕರಿಬಸಪ್ಪ ಅವರ ಮೊಬೈಲ್ ಹಾಗೂ ಬೈಕ್ ಪತ್ತೆಯಾದ ಹಿನ್ನೆಲೆ, ಮೃತರನ್ನು ಕರಿಬಸಪ್ಪ ಎಂದು ಗುರುತಿಸಲಾಗಿದೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.