ಕಲಬುರಗಿ: ವ್ಯಕ್ತಿಯೊಬ್ಬನನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಸಂಗಮ್ ಬಳಿ ನಡೆದಿದೆ.
ರಸ್ತೆ ಮಧ್ಯೆ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ: ಆಸ್ತಿಗಾಗಿ ಹತ್ಯೆ ಶಂಕೆ - ಮಾರ್ಗಮಧ್ಯೆ ವ್ಯಕ್ತಿಯ ಕೊಲೆ
ವ್ಯಕ್ತಿಯೊಬ್ಬನನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.
ಆಸ್ತಿಗಾಗಿ ಹತ್ಯೆ
ಇದೇ ಗ್ರಾಮದ ನಿವಾಸಿ ದೇವಿಂದ್ರಪ್ಪ (35) ಕೊಲೆಯಾದ ವ್ಯಕ್ತಿ. ಇವರು ಹಾಲು ತರಲು ತೋಟಕ್ಕೆ ಹೋಗುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದೆ.
ಆಸ್ತಿ ವಿಚಾರವಾಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.