ಕರ್ನಾಟಕ

karnataka

ETV Bharat / state

ತೆಲಂಗಾಣದಿಂದ ಬಂದ ಕಾರ್ಮಿಕ ಕುಟುಂಬ ತಡವಾಗಿ ಕ್ವಾರಂಟೈನ್‌ಗೆ​ - Sedam in Kalaburagi

ತೆಲಂಗಾಣದ ಕೊಡಂಗಲದಿಂದ 4 ದಿನಗಳ ಹಿಂದೆ ಸೇಡಂಗೆ ಬಂದ ಕುಟುಂಬವೊಂದು ಕ್ವಾರಂಟೈನ್​ಗೆ ಒಳಗಾಗದೆ ಮನಸೋ ಇಚ್ಛೆ ನಗರದಲ್ಲಿ ಸುತ್ತಾಡಿ ಜನರಲ್ಲಿ ಆತಂಕ ಮೂಡಿಸಿದೆ.

A family came from Telangana found roming in Sedam
ರಾಜ್ಯ ಗಡಿ ದಾಟಿ ಬಂದು ರಾಜಾರೋಷವಾಗಿ ಸುತ್ತಾಡುತ್ತಿದ್ದ ಕುಟುಂಬ ಕ್ವಾರಂಟೈನ್​ ಗೆ

By

Published : May 17, 2020, 9:32 PM IST

ಸೇಡಂ(ಕಲಬುರಗಿ):ತೆಲಂಗಾಣದ ಕೊಡಂಗಲದಿಂದ 4 ದಿನಗಳ ಹಿಂದೆ ಸೇಡಂಗೆ ಬಂದ ಕುಟುಂಬವೊಂದು ಅಧಿಕಾರಿಗಳಿಗೆ ಮಾಹಿತಿ ನೀಡದೆ ಮನಸೋ ಇಚ್ಛೆ ನಗರದಲ್ಲಿ ಸುತ್ತಾಡಿ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ ಈ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೇರೆ ರಾಜ್ಯಗಳಿಂದ ವಲಸೆ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು ಎಂಬ ಸರ್ಕಾರದ ಆದೇಶದ ನಡುವೆಯೂ ತೆಲಂಗಾಣದಿಂದ ಬಂದ ಕುಟುಂಬವೊಂದು ತಮಗೆ ಇಷ್ಟ ಬಂದ ಕಡೆ ಸುತ್ತಾಡಿದೆ. ತೆಲಂಗಾಣದ ಕೊಡಂಗಲನಿಂದ 4 ದಿನಗಳ ಹಿಂದೆ ಬಂದಿರುವುದಾಗಿ ಹೇಳಿರುವ ಕಾರ್ಮಿಕ ಕುಟುಂಬ ಪಟ್ಟಣದ ವಿಧಾನಸೌಧ ರಸ್ತೆಯ ಪಕ್ಕದಲ್ಲಿ ಮರದಡಿ ಆಶ್ರಯ ಪಡೆದಿತ್ತು.

ಬೀದಿ ಬದಿಯಲ್ಲಿದ್ದ ಈ ಕುಟುಂಬವನ್ನು ಗಮನಿಸಿ ಈಟಿವಿ ಭಾರತ ಸಿಬ್ಬಂದಿ ಪ್ರಶ್ನಿಸಿದಾಗ, ತಾವು 4 ದಿನಗಳ ಹಿಂದೆ ತೆಲಂಗಾಣ ಗಡಿಯ ಮೂಲಕ ಕಾಲ್ನಡಿಗೆಯಲ್ಲಿ ಸೇಡಂ ತಲುಪಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕೆಲ ದಿನ ಗಂಜ್ ಏರಿಯಾ ಮತ್ತು ಮೈಸಮ್ಮ ದೇವಾಲಯದಲ್ಲಿ ಆಶ್ರಯ ಪಡೆದಿದ್ದು, ಈಗ ದುಗನೂರು ಗ್ರಾಮಕ್ಕೆ ತೆರಳುವುದಾಗಿ ಇವರು ಹೇಳಿಕೊಂಡಿದ್ದಾರೆ.

ಈ ವಿಚಾರವನ್ನು ಕೂಡಲೇ ತಹಶೀಲ್ದಾರ್​ ಬಸವರಾಜ ಬೆಣ್ಣೆಶಿರೂರ ಮತ್ತು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಅವರ ಗಮನಕ್ಕೆ ತರಲಾಗಿದೆ. ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಸರ್ಕಾರದ ಕಣ್ಣು ತಪ್ಪಿಸಿ ಮೂರ್ನಾಲ್ಕು ದಿನಗಳ ಕಾಲ ಸೇಡಂನಲ್ಲಿ ಈ ಕುಟುಂಬ ಸಂಚರಿಸಿದ್ದು, ಇದೇ ರೀತಿ ಮತ್ತಷ್ಟು ಜನ ತಾಲೂಕು ಪ್ರವೇಶಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ABOUT THE AUTHOR

...view details