ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕುಡುಕನ ಅವಾಂತರ: ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ ಪರಾರಿ - A drunkard who threw stones at vehicles

ಕುಡಿದ ಅಮಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಮನೆಗಳ ಮುಂದೆ ನಿಲ್ಲಿಸಿದ್ದ ಹಲವು ವಾಹನಗಳ ಮೇಲೆ ಕಲ್ಲು ಮತ್ತು ಕಟ್ಟಿಗೆಯಿಂದ ಹೊಡೆದು ಹಾನಿ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

a-drunkard-who-threw-stones-at-vehicles
ಕಲಬುರಗಿಯಲ್ಲಿ ಕುಡುಕನ ಅವಾಂತರ: ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ ಪರಾರಿ

By

Published : Oct 18, 2022, 3:52 PM IST

Updated : Oct 18, 2022, 4:05 PM IST

ಕಲಬುರಗಿ : ಕುಡಿದ ಅಮಲಿನಲ್ಲಿ ಯುವಕನೋರ್ವ ಮನೆಗಳ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಕಲ್ಲು ಹಾಕಿ ಜಖಂಗೊಳಿಸಿರುವ ಘಟನೆ ನ್ಯೂ ರಾಘವೇಂದ್ರ ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯಲ್ಲಿ ನಡೆದಿದೆ.

ಕಲಬುರಗಿಯಲ್ಲಿ ಕುಡುಕನ ಅವಾಂತರ: ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ ಪರಾರಿ

ಸೋಮವಾರ ತಡರಾತ್ರಿ ಕುಡಿದ ಅಮಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್, ಕಾರು, ಅಟೋಗಳ ಮೇಲೆ ಕಲ್ಲು, ಕಟ್ಟಿಗೆಯಿಂದ ಹೊಡೆದು ಜಖಂಗೊಳಿಸಿದ್ದಾನೆ. ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಈ ಕುಡುಕನ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ನ್ಯೂ ರಾಘವೇಂದ್ರ ಕಾಲೋನಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ :ಬಾಗಲಕೋಟೆ: ಡೀಸೆಲ್​ ತುಂಬಿದ್ದ ಟ್ಯಾಂಕರ್​ ಪಲ್ಟಿಯಾಗಿ ಬೆಂಕಿಗಾಹುತಿ

Last Updated : Oct 18, 2022, 4:05 PM IST

ABOUT THE AUTHOR

...view details