ಕಲಬುರಗಿ:ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ. ಚಿತ್ತಾಪುರ ತಾಲೂಕು ಶಾಹಾಬಾದ್ ಮಡ್ಡಿ ನಿವಾಸಿ ಮಲ್ಲಿಕಾರ್ಜುನ ಪತ್ತೆಪುರ (34) ಮೃತ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ತಾಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆ ಪ್ರಯುಕ್ತ ತಹಶೀಲ್ದಾರ್ ಕಚೇರಿಗೆ ಫ್ಲೈಯಿಂಗ್ ಸ್ವ್ಕಾಡ್‌ನಲ್ಲಿ ಸೇವೆಗೆ ನೇಮಕ ಮಾಡಲಾಗಿತ್ತು.
ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಕಾನ್ಸ್ಟೇಬಲ್ ಆತ್ಮಹತ್ಯೆ - constable committed suicide by shooting himself
303 ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
![ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಕಾನ್ಸ್ಟೇಬಲ್ ಆತ್ಮಹತ್ಯೆ constable committed suicide by shooting himself](https://etvbharatimages.akamaized.net/etvbharat/prod-images/1200-675-18419084-thumbnail-16x9-meeg.jpg)
ಗುಂಡು ಹಾರಿಸಿಕೊಂಡು ಕರ್ತವ್ಯ ನಿರತ ಕಾನ್ಸ್ಟೆಬಲ್ ಆತ್ಮಹತ್ಯೆ
ಇಂದು ಕರ್ತವ್ಯದಲ್ಲಿ ಇರುವಾಗಲೇ 303 ರೈಫಲ್ಲಿಂದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಇದನ್ನೂ ಓದಿ:ಸದ್ದು ಮಾಡಬೇಡ ಎಂದಿದ್ದಕ್ಕೆ ಗುಂಡು ಹಾರಿಸಿ ಕೊಂದೇ ಬಿಟ್ಟ!: ಟೆಕ್ಸಾಸ್ನಲ್ಲಿ ಐವರ ಹತ್ಯೆ