ಕರ್ನಾಟಕ

karnataka

ETV Bharat / state

ಕಲಬುರಗಿ ಇಂದು ಸಂಪೂರ್ಣ ಲಾಕ್​ಡೌನ್​: ಬಿಕೋ ಎನ್ನುತ್ತಿರುವ ರಸ್ತೆಗಳು - ಕಲಬುರಗಿಯಲ್ಲಿ ಕೊರೊನಾ ಪ್ರಕರಣಗಳು

ಕಲಬುರಗಿ ಜಿಲ್ಲೆಯನ್ನು ಇಂದು ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದ್ದು,ಪೊಲೀಸ್​ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

dsdd
ಕಲಬುರಗಿ ಇಂದು ಸಂಪೂರ್ಣ ಲಾಕ್​ಡೌನ್

By

Published : May 24, 2020, 11:05 AM IST

ಕಲಬುರಗಿ: ಕೊರೊನಾ ತಡೆಗಟ್ಟಲು ರಾಜ್ಯಾದ್ಯಂತ ಇಂದು ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲಬುರಗಿ ಇಂದು ಸಂಪೂರ್ಣ ಲಾಕ್​ಡೌನ್​

ಬಹುತೇಕ ರಸ್ತೆಗಳಲ್ಲಿ ಅಷ್ಟಾಗಿ ವಾಹನಗಳು ಕಾಣಿಸದೆ ಸಂಚಾರ ವಿರಳವಾಗಿದೆ. ತುರ್ತು ಸೇವೆಗಳಿಗೆ ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟು ಬಂದ್​​ ಮಾಡಲಾಗಿದೆ. ಡಿಸಿಪಿ, ಎಸಿಪಿ, ಪಿಎಸ್​ಐ ಸೇರಿ ಸುಮಾರು 700 ಪೊಲೀಸರನ್ನು ಬಂದೋಬಸ್ತ್​ಗಾಗಿ ನಿಯೋಜನೆ ಮಾಡಲಾಗಿದೆ. ಮೂರು ಕೆ.ಎಸ್.ಆರ್.ಪಿ., 9 ಸಿ.ಎ.ಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ನಾಳೆ ಬೆಳಗ್ಗೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.

ABOUT THE AUTHOR

...view details