ಸೇಡಂ (ಕಲಬುರಗಿ):ಪಟ್ಟಣದ ಪ್ರಮುಖ ಉದ್ಯಮಿಯೋರ್ವರು ಇಂದು ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದ್ದು, ಕುಟುಂಬ ವಲಯದಲ್ಲಿ ಆತಂಕ ಮನೆಮಾಡಿದೆ.
ಉದ್ಯಮಿ ನಿಗೂಢ ಕಣ್ಮರೆ: ನದಿಯಲ್ಲಿ ಮುಂದುವರಿದ ಶೋಧ ಕಾರ್ಯ - ಶ್ಯಾಮರಾವ ಊಡಗಿ ಕಣ್ಮರೆಯಾದ ಉದ್ಯಮಿ
ಸೇಡಂ ಪಟ್ಟಣದ ಉದ್ಯಮಿಯೋರ್ವರು ಇಂದು ಬೆಳಗ್ಗೆಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದು, ಬಿಬ್ಬಳ್ಳಿ ಗ್ರಾಮದ ನದಿಯಲ್ಲಿ ಅವರಿಗೆ ಸೇರಿದ ಚಪ್ಪಲಿ ಹಾಗೂ ಬೈಕ್ ದೊರೆತಿವೆ. ಈ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ನದಿಯಲ್ಲಿ ಮುಂದುವರಿದ ಶೋಧ ಕಾರ್ಯ
ತಾಲೂಕಿನ ಶ್ಯಾಮರಾವ ಊಡಗಿ (55) ಎಂಬ ಉದ್ಯಮಿ ಇಂದು ಬೆಳಿಗ್ಗೆಯಿಂದ ಕಣ್ಮರೆಯಾಗಿದ್ದು, ಬಿಬ್ಬಳ್ಳಿ ಗ್ರಾಮದಲ್ಲಿ ಹರಿಯುವ ನದಿಯ ಪಕ್ಕದಲ್ಲಿ ಶ್ಯಾಮರಾವ್ಗೆ ಸೇರಿದ ಬೈಕ್ ಮತ್ತು ಚಪ್ಪಲಿ ದೊರೆತಿವೆ. ಈ ಆಧಾರದ ಮೇಲೆ ನದಿಯಲ್ಲಿ ಮೀನುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ನದಿಯಲ್ಲಿ ಉದ್ಯಮಿಯ ಪತ್ತೆ ಕಾರ್ಯ ನಡೆದಿದ್ದು, ಮಳಖೇಡ ಪಿಎಸ್ಐ ಶಿವಶಂಕರ ಸಾಹು, ಸೇಡಂ ಪಿಎಸ್ಐ ಸುಶೀಲಕುಮಾರ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.