ಸೇಡಂ: ದಿನೇ ದಿನೆ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇಂದು ಮತ್ತೆ 8 ಜನರಲ್ಲಿ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.
ಕ್ಷೌರಿಕನಿಗೆ ಸೋಂಕು ದೃಢ.. ಕ್ಷೌರ ಮಾಡಿಸಿಕೊಂಡವರಿಗೆ ಆತಂಕ! - Sedan corona news
8 ಜನರಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಕ್ಷೌರಿಕನಿಗೂ ಸೋಂಕು ತಗುಲಿದ್ದು, ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
Sedam corona case
ರವಿವಾರ ತಾಲೂಕಿನ ಬಿಬ್ಬಳ್ಳಿ, ತೊಟ್ನಳ್ಳಿ, ಊಡಗಿ, ಕೋಡ್ಲಾ ಗ್ರಾಮಗಳಲ್ಲಿ ತಲಾ ಒಂದು ಪ್ರಕರಣ ಹಾಗೂ ಕೊರೊನಾ ಟೆಸ್ಟಿಂಗ್ ಲ್ಯಾಬ್ನ ನಾಲ್ಕು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಅವರನ್ನು ಕಲಬುರಗಿ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸೋಮವಾರ ಶ್ರಾವಣ ಮಾಸ ಆರಂಭ ಹಿನ್ನೆಲೆಯಲ್ಲಿ ರವಿವಾರ ಬಿಬ್ಬಳ್ಳಿ ಗ್ರಾಮದ ಕೆಲವರು ಕ್ಷೌರ ಮಾಡಿಸಿಕೊಂಡಿದ್ದಾರೆ. ಆದರೆ ಕ್ಷೌರ ಮಾಡಿದವನಿಗೂ ಕೊರೊನಾ ತಗುಲಿದ್ದು, ಜನರಲ್ಲಿ ಆತಂಕ ಮತ್ತಷ್ಟು ಜಾಸ್ತಿಯಾಗಿದೆ.