ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಇಂದು 66​ ಪ್ರಕರಣಗಳು ಪತ್ತೆ, ಕೊರೊನಾಗೆ ವೃದ್ಧ ಬಲಿ - ಕಲಬುರಗಿ ಕೊರೊನಾ ಸುದ್ದಿ,

ಕಲಬುರಗಿ ಜಿಲ್ಲೆಯಲ್ಲಿ ಇಂದು 66​ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, ವ್ಯಕಿಯೊಬ್ಬ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.

One person died, One person died form corona, One person died form corona in Kalaburagi, Kalaburagi corona news, Kalaburagi corona 2020 news, ವ್ಯಕ್ತಿ ಸಾವು, ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವು, ಕಲಬುರಗಿಯಲ್ಲಿ ಕೊರೊನಾಗೆ ವ್ಯಕ್ತಿ ಬಲಿ, ಕಲಬುರಗಿ ಕೊರೊನಾ ಸುದ್ದಿ, ಕಲಬುರಗಿ ಕೊರೊನಾ 2020 ಸುದ್ದಿ,
ಕಲಬುರಗಿಯಲ್ಲಿ ಇಂದು 66​ ಪ್ರಕರಣಗಳು ಪತ್ತೆ

By

Published : Oct 16, 2020, 11:53 PM IST

ಕಲಬುರಗಿ:ಜಿಲ್ಲೆಯಲ್ಲಿ ಕೊರೊ‌ನಾ ಸೋಂಕಿನಿಂದ ಮತ್ತೋರ್ವ ಮೃತಪಟ್ಟಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 298 ಕ್ಕೆ ಏರಿಕೆಯಾಗಿದೆ.

ಆಳಂದ ತಾಲೂಕು ವಿಕೆ ಸಲಗರ ಗ್ರಾಮದ 78 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆಂದು ಇಂದಿನ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.

ಇನ್ನು ಜಿಲ್ಲೆಯಲ್ಲಿ ಹೊಸದಾಗಿ 66 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 18,899 ಕ್ಕೇರಿದೆ. 231 ಜನರು ಕೊರೊನಾದಿಂದ ಗುಣಮುಖರಾಗಿ ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಇಲ್ಲಿಯವರೆಗೆ ಒಟ್ಟು 17,489 ಜನರು ಗುಣಮುಖರಾಗಿದ್ದಾರೆ. 1,112 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಕೋವಿಡ್​ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details